ಸಾಮಾಜಿಕ ಬದಲಿಗೆ ಆರ್ಥಿಕ ಮೀಸಲಾತಿ ಗುರಿ

29-msk-1
Published on

ಮಸ್ಕಿ: ರಾಜ್ಯದಲ್ಲಿ ಭಾಷಣದ ಮೂಲಕ ಅಶಾಂತಿಯನ್ನು ಸೃಷ್ಟಿಸುವವರನ್ನು ಬಂಧಿಸಬೇಕು ಎಂದು ಸಿಪಿಐಎಂಎಲ್ ರೆಡ್‌ಸ್ಟಾರ್ ಜಿಲ್ಲಾ ಘಟಕದ ಸದಸ್ಯ ಸಂತೋಷ ಹಿರೇದಿನ್ನಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಸಂವಿಧಾನದ ಜಾಗದಲ್ಲಿ ಮನುಸ್ಮತಿ ತರುವುದು ಹಾಗೂ ದೇಶವನ್ನು ಬ್ರಾಹ್ಮಣವಾದಿ ಹಿಂದು ರಾಷ್ಟ್ರವನ್ನಾಗಿಸುವುದು ಬಿಜೆಪಿಯವರ ಉದ್ದೇಶವಾಗಿದೆ. ಸಾರ್ವತ್ರಿಕ ರಂಗಗಳನ್ನು ಖಾಸಗೀಕರಿಸುವುದು, ಸಾಮಾಜಿಕ ಮೀಸಲಾತಿಯ ಜಾಗದಲ್ಲಿ ಆರ್ಥಿಕ ಮೀಸಲಾತಿ ತಂದು ಜಾತಿ ವ್ಯವಸ್ಥೆ ಹಾಗೂ ಲಿಂಗ ತಾರತಮ್ಯವನ್ನು ಬೆಳೆಸುವುದು ಬಿಜೆಪಿಯ ಗುರಿಯಾಗಿದೆ ಎಂದು ಆರೋಪಿಸಿದರು.

ಒಳ ಮೀಸಲಾತಿ ಜಾರಿ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ದಲಿತರನ್ನು ದಿಕ್ಕು ತಪ್ಪಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳವು ವೋಟಿಗಾಗಿ ಬಿಜೆಪಿ ನಡೆಸಿದ ನಾಟಕವಾಗಿದೆ ಎಂದರು. ತಾಲೂಕು ಕಾರ್ಯದರ್ಶಿ ಮಾರುತಿ ಜಿನ್ನಾಪುರ, ವೆಂಕಟೇಶ್ ನಾಯಕ ಚಿಲ್ಕರಾಗಿ, ತಿರುಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net