

ಪ್ರಶಾಂತ ಭಾಗ್ವತ ಉಡುಪಿ
ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವಿಸ್ತರಿತ ದಿನ ಮುಗಿದರೂ ಸಹ ಜಿಲ್ಲೆಯಲ್ಲಿ ಗಣತಿ ಕಾರ್ಯ ಪೂರ್ಣಗೊಂಡಿಲ್ಲ. ಮತ್ತೆ ಅ.25ರ ವರೆಗೆ ಅವಕಾಶ ನೀಡಿದ್ದು, ಸಮೀಕ್ಷೆಯ ಪರೀಕ್ಷೆ ಮುಂದುವರಿದಿದೆ.
ಸೆ.22ರಿಂದ ರಾಜ್ಯಾದ್ಯಂತ ಆರಂಭಗೊಂಡಿದ್ದ ಸಮೀಕ್ಷೆ ಕಾರ್ಯ ಅ.8ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, ರಾಜ್ಯದ ಯಾವ ಭಾಗದಲ್ಲಿಯೂ ಸಮರ್ಪಕವಾಗಿ ಹಾಗೂ ಕಾರ್ಯಯೋಜನೆಯಂತೆ ಗಣತಿ ನಡೆದಿರಲಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ಮತ್ತೆ 10 ದಿನ ವಿಸ್ತಿರಿಸಿ ಅ.18ರ ವರೆಗೆ ಸಮೀಕ್ಷೆ ನಡೆಸಲು ಕಾಲಾವಕಾಶ ನೀಡಿದ್ದರು.
ತಾಲೂಕು ಕುಟುಂಬ ಬ್ಲಾಕ್ ಪೂರ್ಣಗೊಂಡ ಮನೆ ಶೇಕಡ ಬೈಂದೂರು 26,623 246 27,535 93.49 ಹೆಬ್ರಿ 13,422 121 11,783 97.67 ಕುಂದಾಪುರ 66,678 621 56,611 93.59 ಬ್ರಹ್ಮಾವರ 51,775 465 41,256 94.36 ಕಾರ್ಕಳ 58,634 531 42,842 91.12 ಕಾಪು 46,286 403 31,980 91.86 ಉಡುಪಿ 98,675 844 55,046 80.91 ಒಟ್ಟು 3,62,093 3,231 2,67,053 90.55
ಉಡುಪಿ ಜಿಲ್ಲೆಯಲ್ಲಿ ಸಮೀಕ್ಷೆ ಬಹುತೇಕ ಪೂರ್ಣಗೊಂಡಿದ್ದು, ಕೇವಲ 3ರಿಂದ 4 ಸಾವಿರ ಜನರ ಗಣತಿಯಷ್ಟೇ ಬಾಕಿಯಿದೆ. ಭಾನುವಾರ (ಅ.19) ಸಂಜೆಯವರೆಗೂ ಶಿಕ್ಷಕರು ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಶಾಲೆ ಪುನರಾರಂಭ ಮಾಡಬೇಕಿರುವ ಹಿನ್ನೆಲೆಯಲ್ಲಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಬಿಟ್ಟುಹೋದ ಹಾಗೂ ಬಾಕಿ ಇರುವ ಕುಟುಂಬಗಳ ಸರ್ವೇ ಪೂರ್ಣಗೊಳಿಸಲು ಶಿಕ್ಷಕೇತರ ಸರ್ಕಾರಿ ನೌಕರರನ್ನು ಬಳಸಿಕೊಳ್ಳಲಾಗುವುದು. ಅ.25ರ ಒಳಗೆ ಸಮೀಕ್ಷೆ ಪೂರ್ಣಗೊಳಿಸಲು ಅಂತಿಮ ಗಡುವು ನೀಡಲಾಗಿದೆ. | ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.