

ಆರ್ಡಿ: ದಾನಿಗಳು, ಹಳೇ ವಿದ್ಯಾರ್ಥಿಗಳು, ಪಾಲಕರ ಕೊಡುಗೆಗಳಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾಧ್ಯ. ಶಿಕ್ಷಕರ ಸೇವೆ, ವಿದ್ಯಾರ್ಥಿಗಳ ಶ್ರಮದಿಂದ ಸಮಾಜದ ಬೆಳವಣಿಗೆ ಸಾಧ್ಯವಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಆನಂದ ಪೂಜಾರಿ ಅಲ್ಬಾಡಿ ಹೇಳಿದರು.
ಅಲ್ಬಾಡಿ ಮೂರುಕೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಯಪ್ರಕಾಶ್ ಶೆಟ್ಟಿ ಮರೂರು, ರಾಘವೇಂದ್ರ ಗೌಡ, ಸುದರ್ಶನ ಬೇಳಂಜೆ, ಸೀತಮ್ಮಾ, ಅಮ್ಮಣ್ಣಿ ಪೂಜಾರ್ತಿ ಅವರನ್ನು ಸನ್ಮಾನಿಸಲಾಯಿತು.
ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ, ಪ್ರಮುಖರಾದ ವೈ.ಪಟ್ಟಾಭಿರಾಮ್ ಭಟ್, ರಾಘವೇಂದ್ರ ಗೌಡ, ಪ್ರಸಾದ್ ಪೂಜಾರಿ, ಮನುಶ್ರೀ ಶೆಟ್ಟಿ, ಸುದೀಪ್ ಶೆಟ್ಟಿ, ದಿನಕರ ಶೆಟ್ಟಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಪಾರ್ವತಿ, ಪಾಲಕರು, ಶಿಕ್ಷಕ ವೃಂದ ಉಪಸ್ಥಿತರಿದ್ದರು. ಹೆರಿಯಣ್ಣ ನಾಯ್ಕ ಸ್ವಾಗತಿಸಿದರು. ಆಶಾ ಬಹುಮಾನ ಪಟ್ಟಿ ವಾಚಿಸಿದರು. ಸುಶ್ಮಿತಾ ವಂದಿಸಿದರು. ಸುಕನ್ಯಾ ಕಾರ್ಯಕ್ರಮ ನಿರೂಪಿಸಿದರು.