ಸಿನಿಮಾದಲ್ಲಿ ಸಾಮಾಜಿಕ ಕಳಕಳಿ ಇರಲಿ

CTD 16 Cinema-10
Published on

ಚಿತ್ರದುರ್ಗ: ಹಳೆಯ ಸಿನಿಮಾಗಳು ಸಮಾಜಕ್ಕೆ ಉತ್ತಮ ಸಂದೇಶ ಸಾರಿವೆ. ಆದರೆ, ಪ್ರಸ್ತುತ ಚಲನಚಿತ್ರ ಜಗತ್ತು ವ್ಯಾಪಾರೀಕರಣವಾಗಿ ಬದಲಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಧಾನಪರಿಷತ್ ಮಾಜಿ ಸದಸ್ಯ ರಘುಆಚಾರ್ ವಿಷಾದಿಸಿದರು.

ನಿರ್ಮಾಪಕ, ನಟ ಕೆ.ಮಂಜುನಾಥ ನಾಯ್ಕ ಅವರ ಕಾದಂಬರಿ ಆಧಾರಿತ ‘ಅರಳಿದ ಹೂಗಳು’ ಚಲನಚಿತ್ರ ಗೀತೆಗಳ ವೀಡಿಯೋವನ್ನು ಬಂಜಾರ ಭವನದಲ್ಲಿ ಸೋಮವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಸಿನಿಮಾಕ್ಕಿಂತ ಶಕ್ತಿಶಾಲಿ ಆಯುಧ ಬೇರೆ ಯಾವುದೂ ಇಲ್ಲ. ಹೀಗಾಗಿ ಇದನ್ನು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಬಳಸಿಕೊಳ್ಳುವುದು ಅತ್ಯಂತ ಸೂಕ್ತ ಎಂದು ಅಭಿಪ್ರಾಯಪಟ್ಟರು.

ನಿರ್ದೇಶಕ ಪುರುಷೋತ್ತಮ್ ಓಂಕಾರ್ ಮಾತನಾಡಿ, ಸ್ತ್ರೀ ಅಬಲೆಯಲ್ಲ, ಸಬಲೆ ಎಂಬುದನ್ನು ಚಿತ್ರದ ಮೂಲಕ ತೋರಿಸುತ್ತಿದ್ದು, ಉತ್ತಮ ಸಂದೇಶಗಳಿವೆ. ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಇದಾಗಿದ್ದು, ಯಶಸ್ವಿಯಾಗಬೇಕಾದರೆ ಪ್ರೇಕ್ಷಕರಿಂದ ಮಾತ್ರ ಸಾಧ್ಯ ಎಂದರು.

ನಿವೃತ್ತ ಶಿಕ್ಷಕ, ನಟ ಕೆ.ಮಂಜುನಾಥನಾಯ್ಕ, ನಟಿ ಧನಲಕ್ಷ್ಮೀ, ಎಸ್‌ಆರ್‌ಎಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ, ಟೌನ್ ಕ್ಲಬ್ ಕಾರ್ಯದರ್ಶಿ ಚಿತ್ರಲಿಂಗಪ್ಪ, ಖಜಾಂಚಿ ಅಮಿತ್‌ಜೈನ್, ಪಿ.ಟಿ.ಪರಮೇಶ್ವರಪ್ಪ, ಶಿವಕುಮಾರ್, ರಾಜೇಂದ್ರಾಚಾರ್, ಎಚ್.ಮಂಜಪ್ಪ, ಸಹ ನಿರ್ದೇಶಕ ಎಂ.ಸುನಿತ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net