ಶರಣರ ವಚನಗಳಿಂದ ಸಾಮಾಜಿಕ ಜಾಗೃತಿ

ಸಿಂಧನೂರಿನಲ್ಲಿ ಮೌಢ್ಯಮುಕ್ತ ಬದುಕಿಗಾಗಿ ವಚನ ಶ್ರವಣ ಹಾಗೂ ಮಹಾಂತ ಶಿವಯೋಗಿಗಳ ಜನ್ಮ ದಿನ ಕಾರ್ಯಕ್ರಮ ನಡೆಯಿತು. ಲೇಖಕ ಡಾ.ಮಲ್ಲಿಕಾರ್ಜುನ ಕಮತಗಿ, ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲನಗೌಡ ಬಾದರ್ಲಿ, ನಿತ್ಯ ಸಂಜೀವಿನಿ ಸಹಕಾರಿ ಅಧ್ಯಕ್ಷ ಟಿ.ಎಂ.ಪಾಟೀಲ್, ಪುರಸಭೆ ಮಾಜಿ ಅಧ್ಯಕ್ಷೆ ದೇವಿರಮ್ಮ, ದಾಸೋಹಿಗಳಾದ ಶ್ವೇತಾ ದೊಡ್ಡಬಸವ ನಗರನೂರು, ಜ್ಯೋತಿ ಸಂಗನಗೌಡ ಬಲ್ಲಟಗಿ ಇದ್ದರು.

Published on

ಸಿಂಧನೂರು: ವಚನ ಸಾಹಿತ್ಯ, ಸಾಮಾಜಿಕ ಚಳವಳಿಯಲ್ಲಿ ಮಹಿಳೆಯರು ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಲೇಖಕ ಡಾ.ಮಲ್ಲಿಕಾರ್ಜುನ ಕಮತಗಿ ಹೇಳಿದರು.

ನಗರದ ಬಸವ ಪ್ರಸಾದ ನಿಲಯದಲ್ಲಿ ಬಸವಕೇಂದ್ರ, ಯುವ ಬಸವಕೇಂದ್ರ, ಮಹಿಳಾ ಬಸವಕೇಂದ್ರ, ಬಸವ ಚಾರಿಟಬಲ್ ಟ್ರಸ್ಟ್, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ಶರಣ ಸಾಹಿತ್ಯ ಪರಿಷತ್ ಹಾಗೂ ರಾಷ್ಟ್ರೀಯ ಬಸವದಳ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮೌಢ್ಯಮುಕ್ತ ಬದುಕಿಗಾಗಿ ವಚನ ಶ್ರವಣ ಹಾಗೂ ಮಹಾಂತ ಶಿವಯೋಗಿಗಳ ಜನ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಕ್ಕಮಹಾದೇವಿ, ಗಂಗಮ್ಮ, ಲಕ್ಷ್ಮಮ್ಮ, ಕಾಳವ್ವ ಹಾಗೂ ಲಕ್ಕವ್ವ ಅವರಂಥ ಅನೇಕ ಶರಣೆಯರು ವಚನಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಸಾಮಾಜಿಕ ಚಳವಳಿಯಲ್ಲಿ ಮಹಿಳಾ ಸಮಾನತೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ ದೊರೆಯಿತು. ಶರಣರು ಲಿಂಗ, ಜಾತಿ ಭೇದ ತೊಡೆದು ಹಾಕುವ ಮೂಲಕ ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದರು. ಅನೇಕ ಶರಣೆಯರು ವಚನಗಳ ಮೂಲಕ ಅನಿಷ್ಠ ಪದ್ಧತಿಗಳಗಳನ್ನು ಟೀಕಿಸುವ ಜತೆ ಆಧ್ಯಾತ್ಮಿಕ ಚಿಂತನೆಗಳನ್ನು ಮಂಡಿಸಿದ್ದಾರೆ ಎಂದು ತಿಳಿಸಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲನಗೌಡ ಬಾದರ್ಲಿ, ಬಸವಕೇಂದ್ರದ ಅಧ್ಯಕ್ಷ ಕೆರೇಗೌಡ ಪೊಪಾ, ಆರ್‌ಡಿಸಿಸಿ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಬಸವರಾಜ, ನಿತ್ಯ ಸಂಜೀವಿನಿ ಸಹಕಾರಿ ಅಧ್ಯಕ್ಷ ಟಿ.ಎಂ.ಪಾಟೀಲ್, ಪುರಸಭೆ ಮಾಜಿ ಅಧ್ಯಕ್ಷೆ ದೇವಿರಮ್ಮ, ದಾಸೋಹಿಗಳಾದ ಶ್ವೇತಾ ದೊಡ್ಡಬಸವ ನಗರನೂರು, ಜ್ಯೋತಿ ಸಂಗನಗೌಡ ಬಲ್ಲಟಗಿ, ಎಲ್‌ಬಿಕೆ ಕಾಲೇಜ್ ಪ್ರಾಚಾರ್ಯ ಪರಶುರಾಮ ಮಲ್ಲಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net