

ಯಲ್ಲಾಪುರ: ತಾಲೂಕಿನ ಆನಗೋಡಿನ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ ಗಣಪತಿ ಮಾನಿಗದ್ದೆ ಅವರನ್ನು ಷಷ್ಠಿ ಪೂರ್ತಿಯ ಸಂದರ್ಭದಲ್ಲಿ ಅಭಿನಂದನಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ತುಮಕೂರು ರಾಮಕೃಷ್ಣ ಆಶ್ರಮದ ಶ್ರೀವೀರೇಶಾನಂದ ಸ್ವಾಮೀಜಿ, ಶ್ರೀಪರಮಾನಂದ ಸ್ವಾಮೀಜಿ, ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ, ಹಿರಿಯರಾದ ಅಣ್ಣಯ್ಯ ಭಟ್ಟ ಗುಡೆಪಾಲ, ಅಭಿನಂದನಾ ಸಮಿತಿಯ ಸತೀಶ ಯಲ್ಲಾಪುರ, ನರಸಿಂಹ ಸಾತೊಡ್ಡಿ, ಕೆ.ಎಸ್.ಭಟ್ಟ, ಕೃಷ್ಣ ಪಟೇಲ ಇತರರಿದ್ದರು.