

ಸಿಂಧನೂರು: ರಾಮಕೃಷ್ಣ ವಿವೇಕಾನಂದ ಆಶ್ರಮ ಜನರಲ್ಲಿ ಅಧ್ಯಾತ್ಮದ ಒಲವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಉದ್ಯಮಿ ಜಿ.ಬಿ.ಕೊಟ್ರೇಶ್ವರ ಹೇಳಿದರು.
ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿವೇಕ ಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸದಾ ಒಂದಿಲ್ಲೊಂದು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಆಶ್ರಮ ಜನರಿಗೆ ಹತ್ತಿರವಾಗುತ್ತದೆ. ಇಲ್ಲಿ ಸ್ವಲ್ಪಕಾಲ ಕುಳಿತು ಹೋದರೆ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದರು. ಪಶು ವೈದ್ಯಾಧಿಕಾರಿ ಶಶಿಧರ ಸೊಪ್ಪಿಮಠ ಉಪನ್ಯಾಸ ನೀಡಿದರು.
ಬೂದಿವಾಳಕ್ಯಾಂಪ್‌ನ ಸಾವಯವ ಕೃಷಿಕ ಬಾಪಿನೀಡು ಸಾವಯವ ಕೃಷಿಯ ಮಹತ್ವವನ್ನು ತಿಳಿಸಿದರು. ಪೋತ್ನಾಳದ ವಿ.ಮಂಜುನಾಥ, ಆಶ್ರಮದ ಅಧ್ಯಕ ಸದಾನಂದ ಮಹಾರಾಜ, ಸಹಶಿಕ್ಷಕ ಕಳಕಪ್ಪ ಗಡದ್ ಇತರರಿದ್ದರು.