

ಯಲಬುರ್ಗಾ: ವೃತ್ತಿ ಜತೆಗೆ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿರುವ ವಿಶ್ವಬಂಧು ಸೇವಾ ಗುರುಬಳಗದ ಕಾರ್ಯ ಶ್ಲಾಘನೀಯ ಎಂದು ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ಮರಕಟ್ ಹೇಳಿದರು.
ತಾಲೂಕಿನ ವನಜಭಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಶ್ವಬಂಧು ಸೇವಾ ಗುರುಬಳಗದಿಂದ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಗೋಡೆ ಬರಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಲ್ಲಿ ಕಲಿಕಾಸಕ್ತಿ, ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಪ್ರೇರಣಾದಾಯಕ ಅಕ್ಷರ ಬರಹ, ಗಮನಸೆಳೆಯುವ ಚಿತ್ರಗಳನ್ನು ಬಿಡಿಸಲಾಗಿದ್ದು, ಶಾಲೆ ಸುಂದರವಾಗಿ ಕಾಣುತ್ತಿದೆ. ಇಂಥ ಅನುಪಮ ಸೇವೆಯಲ್ಲಿ ತೊಡಗಿರುವ ಗುರುಬಳಗದ ಕಾರ್ಯ ಮಾದರಿ ಎಂದರು.
ವಿಶ್ವಬಂಧು ಸೇವಾ ಗುರುಬಳಗದ ಸಂತೋಷ ಕೋರಿ ವಿನಯಕುಮಾರ ಪಾಟೀಲ್‌ರನ್ನು ಸನ್ಮಾನಿಸಲಾಯಿತು. ಗುರುಬಳಗದ ಮುಖ್ಯಸ್ಥ ಸಿದ್ದಲಿಂಗಪ್ಪ ಶ್ಯಾಗೋಟಿ, ಗುತ್ತಿಗೆದಾರ ಚಂದಾಲಿಂಗಪ್ಪ ಪರಂಗಿ, ಮುಖ್ಯಶಿಕ್ಷಕ ಬಿ.ಸಿ.ಮಹೇಂದ್ರ, ಶಿಕ್ಷಕ ನಾಗರಾಜ ಪಟಗಾರ, ವಿಶ್ವಬಂಧು ಸೇವಾ ಗುರುಬಳಗದ ಮಲ್ಲಿಕಾರ್ಜುನ ಕುಂಬಾರ, ಸಂಗಯ್ಯ ಹಿರೇಮಠ, ಅಮರೇಶ ಕೋಲಾರ, ವಸಂತಕುಮಾರ, ಜಗದೀಶ ಸಿಂಧೋಗಿ, ಸಿದ್ದಪ್ಪ ಸಜ್ಜಗಾರ, ರಮೇಶ ಕಲಕಬಂಡಿ, ಶಿವರುದ್ರಪ್ಪ, ಮರ್ದಾನ್‌ಸಾಬ್ ನದಾಫ್, ಶರಣು ಬೋದೂರ, ವಿನಾಯಕ ನಾಯ್ಕ ಇತರರಿದ್ದರು.