ಚಿಕ್ಕೋಡಿ: ಪ್ರತಿಯೊಬ್ಬರು ಶ್ರದ್ಧಾ, ಭಕ್ತಿಯಿಂದ ಆಂಜನೇಯನ ಆರಾಧಿಸಿದರೆ ಸಂಕಷ್ಟಗಳು ದೂರಾಗುತ್ತವೆ. ಗ್ರಾಮೀಣ ಪ್ರದೇಶದಲ್ಲಿ ರಕ್ತದಾನ ಸೇರಿ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಗದುಗಿನ ಬ್ರಹನ್ಮಠದ ಸದಾಶಿವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಸಿಎಲ್‌ಇ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳದ ಆಶ್ರಯದಲ್ಲಿ ಹನುಮ ಮಾಲಾಧಾರಿಗಳ 9ನೇ ವರ್ಷದ ಅಭಿಯಾನ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸಂಕೀರ್ತನೆ ಶೋಭಾಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ದೇಶದ ಸಂಸ್ಕೃತಿ ಹಾಗೂ ದೇಶಾಭಿಮಾನ ಉಳಿಸಿ ಬೆಳೆಸುವ ಕಾರ್ಯವನ್ನು ಆರ್‌ಎಸ್‌ಎಸ್ ಮಾಡುತ್ತಿದೆ. ಮಾಲಾಧಾರಿಗಳು ಆಂಜನೇಯನ ದರ್ಶನ ಪಡೆದು ಪುನೀತರಾಗಬೇಕು ಎಂದು ತಿಳಿಸಿದರು.
ಕಬ್ಬೂರಿನ ಗೌರಿಶಂಕರ ಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಚಿಕ್ಕೋಡಿ ಸಂಪಾದನಾ ಸ್ವಾಮೀಜಿ ಮಾತನಾಡಿದರು.
ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಆರ್.ಕೆ.ಬಾಗಿ, ವೆಂಕಟೇಶ ದೇಶಪಾಂಡೆ, ವಿಭಾಗ ಸಹ ಕಾರ್ಯವಾಹ ಸಂಜಯ ಅಡಕೆ, ಬಾಹುಬಲಿ ನಸಲಾಪೂರೆ, ಮಹೇಶ ಭಾತೆ, ಮಲ್ಲಿಕಾರ್ಜುನ ಕವಟಗಿಮಠ, ಬಸವಪ್ರಸಾದ ಜೊಲ್ಲೆ, ವಿಶ್ವನಾಥ ಕಾಮಗೌಡ, ಸತೀಶ ಅಪ್ಪಾಜಿಗೋಳ, ಸಿದ್ದಪ್ಪ ಡಂಗೇರ, ಸಂಜಯ ಕವಟಗಿಮಠ ಇತರರಿದ್ದರು.