

ಧಾರವಾಡ: ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಕಚೇರಿ ೨೨ ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡಿದೆ. ನಿಗಮದಿಂದ ೨೦೧೬ರಿಂದ ೨೦೨೧ರವರೆಗೆ ಕಾಮಗಾರಿ ಮಾಡದೆ, ನಕಲಿ ಬಿಲ್ ಸೃಷ್ಟಿಸಿ ಗುತ್ತಿಗೆದಾರರಿಗೆ ಹಣ ಸಂದಾಯ ಮಾಡಲಾಗಿದೆ. ನಿಗಮದಲ್ಲಿ ನಡೆದ ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ರೈತ ಸೇನಾ ಕರ್ನಾಟಕ ನರಗುಂದ ವೇದಿಕೆಯ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಆಗ್ರಹಿಸಿದರು.
ನಗರದ ನೀರಾವರಿ ಇಲಾಖೆ ಕಚೇರಿ ಎದುರು ೧೧ ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳದಲ್ಲಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದದ ಅವರರು, ನಿಗದಮದ ಎಂ.ಡಿ. ಹುದ್ದೆಯನ್ನು ರದ್ದುಪಡಿಸಿ ನೇರವಾಗಿ ಸರ್ಕಾರದ ಮುಖಾಂತರ ಆಡಳಿತ ನಡೆಸಬೇಕು ಎಂದು ಒತ್ತಾಯಿಸಿದರು.
ನಿಗಮ ವ್ಯಾಪ್ತಿಯ ವಿಭಾಗಗಳಾದ ಬೆಳವಾವಿ ಜಿಲ್ಲೆ ಅಥಣಿಯ ಎಚ್‌ಬಿಸಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್, ಕಲಬುರ್ಗಿ ವಲಯದ ಐಪಿಸಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಮುನಿರಾಬಾದ್ ಶಿರವಾರ ವಲಯದ ನಂ. ೪ ಕಾಲುವೆಯ ಕಾರ್ಯನಿರ್ವಾಹಕ ಇಂಜಿನಿಯರ್‌ಗಳು ೨೮.೩೮ ಕೋಟಿ ರೂ.ಗಳ ನಕಲಿ ಬಿಲ್ ಸೃಷ್ಟಿಸಿ ಹಣ ಲೂಟಿ ಮಾಡಿದ್ದಾರೆ. ಈಗಾಗಲೇ ಸಿಒಡಿ ತನಿಖೆ ಮಾಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ನಿಗಮದ ಎಂ.ಡಿ.ಗೆ ನಿರ್ದೇಶಿಸಿದ್ದಾರೆ. ಆದರೆ, ನಿಗಮದ ಅಽಕಾರಿಗಳ ವಿರುದ್ಧ ಕ್ರಮ ಜರುಗಿಸದೆ ಸರ್ಕಾರಿ ನೌಕರರನ್ನು ಮಾತ್ರ ಬಂಽಸಿ ಕ್ರಮ ಕೈಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ ಎಂದರು.
ಮತ್ತೊAದೆಡೆ ನೀರಾವರಿ ನಿಗಮ ನಷ್ಟದಲ್ಲಿದೆ. ಆದ್ದರಿಂದ ನಿಗಮವನ್ನು ರದ್ದು ಮಾಡಿ ಸರ್ಕಾರದ ಅಽÃನದ ಇಲಾಖೆಯನ್ನಾಗಿ ಮಾರ್ಪಡಿಸಬೇಕು ಎಂದು ಸೊಬರದಮಠ ಆಗ್ರಹಿಸಿದರು.
ಮಲ್ಲಣ್ಣ ಅಲೇಕರ, ಗುರು ರಾಯನಗೌಡ್ರ, ಮಲ್ಲಿಕಾರ್ಜುನಗೌಡ ಬಾಳನಗೌಡ್ರ, ನಾಗಪ್ಪ ಉಂಡಿ, ವೀರಣ್ಣ ಬಳಿಗೇರ, ದೇವೇಂದ್ರಪ್ಪ ದ್ಯಾಪಲಸಿ, ಯಲ್ಲಪ್ಪ ಗಡಚಕಟ್ಟಿ,ಗುರುಶಾಂತ, ಇತರರಿದ್ದರು.