

ಸೋಮವಾರಪೇಟೆ: ದಿ.ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಸ್ಥಳೀಯ ಸಾಕಮ್ಮನ ಬಂಗಲೆ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ 37ನೇ ವರ್ಷದ ರಾಜ್ಯ ಮಟ್ಟದ ಕಬಡ್ಡಿ ಪ್ರಶಸ್ತಿಯನ್ನು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ತಂಡ ಪಡೆದು, ನಗದು ಹಾಗೂ ಪ್ರತಿಷ್ಠಿತ ಟ್ರೋಫಿಯನ್ನು ಪಡೆದುಕೊಂಡಿತು.
ದ್ವಿತೀಯ ಸ್ಥಾನವನ್ನು ವಾಲ್ನೂರು ಅಜಿತ್ ಫ್ರೆಂಡ್ಸ್ ತಂಡ ಹಾಗೂ ತೃತೀಯ ಸ್ಥಾನವನ್ನು ಅರುಣ್ ಫ್ರೆಂಡ್ಸ್ ತಂಡ ಪಡೆಯಿತು.
20 ವರ್ಷದೊಳಗಿನ ವಿಭಾಗದಲ್ಲಿ ಸೋಮವಾರಪೇಟೆ ಜೀವನ್ ಫ್ರೆಂಡ್ಸ್ ತಂಡ ಪ್ರಥಮ, ಸೋಮವಾರಪೇಟೆ ರಾಮಧೂತ ಬಿ ತಂಡ ದ್ವಿತೀಯ, ಶನಿವಾರಸಂತೆ ಅಜಿತ್ ಫ್ರೆಂಡ್ಸ್ ತಂಡ ತೃತೀಯ ಸ್ಥಾನ ಪಡೆಯಿತು. ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಗುತ್ತಿಗೆದಾರ ರವಿ ತಲ್ತಾರೆ, ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ.ನಾಗರಾಜ್ ಬಹುಮಾನ ವಿತರಿಸಿದರು. ಪ್ರಮುಖರಾದ ಮಧುಸೂದನ, ಎಚ್.ಪಿ.ರಾಜಪ್ಪ ಪುನೀತ್, ಮನೋಜ್, ಮಣಿಕಂಠ ಇದ್ದರು.