ಸೋ ಕಾಲ್ಡ್​ ಸೆಕ್ಯುಲರ್​ ಎಂದು ಕರೆಯಿಸಿಕೊಳ್ಳುವವರಷ್ಟು ಜಾತಿವಾದಿಗಳು ಬೇರೊಬ್ಬರಿಲ್ಲ: ಸಚಿವ ಸಿ.ಟಿ.ರವಿ

CT RAVI 2download
Published on

ತುಮಕೂರು: ಸೋ ಕಾಲ್ಡ್ ಸೆಕ್ಯುಲರ್ ಅಂತ ಕರೆಸಿಕೊಳ್ಳುವಂತವರಷ್ಟು ದೊಡ್ಡ ಜಾತಿವಾದಿಗಳು ಇನ್ನೊಬ್ಬರಿಲ್ಲ. ರಾಜಕೀಯ ವ್ಯವಸ್ಥೆಯಲ್ಲಿ ಅವರ ಪಕ್ಷಕ್ಕೆ ಜಾತಿಯನ್ನೇ ಅಸ್ತವಾಗಿ ಬಳಸಿಕೊಳ್ಳುತ್ತಾರೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.

ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕೀಯ ವ್ಯವಸ್ಥೆ ಶುದ್ಧೀಕರಣ, ಶೈಕ್ಷಣಿಕ ವ್ಯವಸ್ಥೆಯ ಶುದ್ಧೀಕರಣದ ಅಗತ್ಯವಿದೆ. ಜಾತೀಯತೆ, ಅಸ್ಪೃಶ್ಯತೆ ಈ ದೇಶದ ಹಿನ್ನಡೆಗೆ ಕಾರಣವಾಗಿದೆ. ಸಾಮಾಜಿಕ ಆಂದೋಲನದ ಅಗತ್ಯವಿದೆ. ಮಠಪತಿಗಳು ಜನಪತಿಗಳಾದ ಈ ಆಂದೋಲನ ಯಶಸ್ವಿಯಾಗಲಿದೆ ಎಂದರು.

ಡಾ.ಶಿವಕುಮಾರ ಸ್ವಾಮೀಜಿ ಸಿದ್ದಗಂಗಾ ಮಠಕ್ಕಷ್ಟೇ ಪೀಠಾಧಿಪತಿ ಆಗಿರಲಿಲ್ಲ, ಅವರು ಜನರ ಮನಸ್ಸಿನಲ್ಲಿಯೇ ಸಿಂಹಾಸನಧೀಶರಾಗಿದ್ದರು ಎಂದು ಸ್ಮರಿಸಿದರು....

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net