ದೀಪದ ಬೆಂಕಿ ತಗುಲಿ ಬಾಲಕಿ ಸಾವು

Crime Logo
Published on

ಶಿಗ್ಗಾಂವಿ: ದೇವಸ್ಥಾನದಲ್ಲಿ ದೀಪ ಹಚ್ಚುವಾಗ ಆಕಸ್ಮಿಕವಾಗಿ ದೀಪದ ಬೆಂಕಿ ಬಟ್ಟೆಗೆ ಹತ್ತಿ ಸುಟ್ಟುಕೊಂಡು 5 ವರ್ಷದ ಬಾಲಕಿ ಮೃತಪಟ್ಟ ಘಟನೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಕೀತಿರ್ ಮಲ್ಲೇಶಪ್ಪ ಚವ್ಹಾಣ (5) ಮೃತ ಬಾಲಕಿ.

ಬಾಲಕಿಯು ದೇವಸ್ಥಾನದಲ್ಲಿ ದೀಪ ಹೆಚ್ಚುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಆಕೆಯ ಬಟ್ಟೆಗೆ ಬೆಂಕಿ ಹತ್ತಿದ್ದರಿಂದ ಬಾಲಕಿ ಸಂರ್ಪೂಣವಾಗಿ ಸುಟ್ಟು ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಕುರಿತು ತಡಸ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net