ಗುರುಗಳ ಸ್ಮರಿಸುವ ಕಾರ್ಯ ಅಭಿನಂದನೀಯ : ಶಾಸಕ ಹರೀಶ್ ಪೂಂಜ ಅಭಿಮತ

New Project (6)
Published on

ಬೆಳ್ತಂಗಡಿ : ವಿದ್ಯಾರ್ಥಿ ಜೀವನ ಅತ್ಯಂತ ಶ್ರೇಷ್ಠ ಸಮಯ. ಅದರಲ್ಲೂ ಕಾಲೇಜು ಜೀವನದಲ್ಲಿ ವಿದ್ಯಾಭ್ಯಾಸ ಒದಗಿಸಿದ ಗುರುಗಳನ್ನು ಸ್ಮರಿಸುವ ಕಾರ್ಯ ಅಭಿನಂದನೀಯ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಬೆಳ್ತಂಗಡಿ ಮೇಲಂತಬೆಟ್ಟು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2005-08ನೇ ಸಾಲಿನ ಬಿಎ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಜತೆಗೂಡಿ ಬಾಳೋಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಶುಭಹಾರೈಸಿದರು. ಪ್ರಾಂಶುಪಾಲ ಸುರೇಶ್ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಅಶೋಕ್ ಭಂಡಾರಿ, ರೇಖಾ, ದಿನೇಶ್ ಬಿ.ಕೆ., ವಸಂತ್ ಬಿ.ಶೆಟ್ಟಿ, ಜಯಶ್ರೀ, ಡಾ.ಸುರೇಶ್ ರೈ, ಯಶೋದಾ, ಸುರೇಶ್ ವಿಟ್ಲ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು. ಆರ್ಥಿಕವಾಗಿ ಹಿಂದುಳಿದ 13 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ವಿತರಿಸಲಾಯಿತು. ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ.ಸುವರ್ಣ, ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ಜಗದೀಶ್ ಕನ್ನಾಜೆ, ಕಾರ್ಯಕ್ರಮ ಸಂಯೋಜಿಸಿದ ಸುಭಾಷ್ ಸುವರ್ಣ, ಸಂದೀಪ್ ಅಡ್ಯಂತಾಯ, ಪ್ರವೀಣ್, ಮಂಜಿತ್ ಶೆಟ್ಟಿ ಹಾಗೂ 2005-08ನೇ ಸಾಲಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ದೇಶದ ಭವಿಷ್ಯವನ್ನು ನಿರ್ಮಿಸುವ ಪೀಳಿಗೆ. ಜೀವನವೇ ಸವಿನೆನಪಿನ ಹೂಗುಚ್ಛವಾಗಬೇಕು. ಇಂದು ಸ್ಪರ್ಧಾತ್ಮಕ ಹಾಗೂ ವಿದ್ಯಾಭ್ಯಾಸಕ್ಕೆ ಎಲ್ಲ ರೀತಿಯ ಅನುಕೂಲವಿರುವ ಕಾಲಟ್ಟ. ವಿದ್ಯಾರ್ಥಿಗಳು ಮನಸ್ಸು ಪೂರ್ವಕವಾಗಿ ಜ್ಞಾನಾರ್ಜನೆಗೆ ಏಕಾಗ್ರತೆ ನೀಡಿದಲ್ಲಿ ಜೀವನ ಸುಭದ್ರತೆ ಪಡೆಯಬಹುದು. ಕೆ.ಪ್ರತಾಪಸಿಂಹ ನಾಯಕ್ ವಿಧಾನಪರಿಷತ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net