ಸ್ನೇಹಕೂಟ ದಶಮಾನೋತ್ಸವ ಲಾಂಛನ ಬಿಡುಗಡೆ

sneha koota
ಸ್ನೇಹಕೂಟ ದಶಮಾನೋತ್ಸವ ಸಂಭ್ರಮದ ಲಾಂಛನ ಬಿಡುಗಡೆ ಮಾಡಲಾಯಿತು.
Published on

ಕೋಟ: ಸ್ನೇಹಕೂಟದ ಸಾಮಾಜಿಕ ಕಾರ್ಯಗಳು ಜನಮನ್ನಣೆ ಗಳಿಸಿವೆ. ದಶಮಾನೋತ್ಸವ ಸಂಭ್ರಮದಲ್ಲಿರುವ ಸಂಘವು ಮತ್ತಷ್ಟು ಪ್ರಸಿದ್ಧಗೊಳ್ಳಲಿ ಎಂದು ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಎಚ್.ಕುಂದರ್ ಹೇಳಿದರು.

ಮಣೂರು ಮಹಾಲಿಂಗೇಶ್ವರ ದೇಗುಲದಲ್ಲಿ ಸ್ನೇಹಕೂಟ ಮಣೂರುದ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಸೋಮವಾರ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು. ನಿವೃತ್ತ ಮುಖ್ಯಶಿಕ್ಷಕ ಎಂ.ಎನ್. ಮಧ್ಯಸ್ಥ ಶುಭಹಾರೈಸಿದರು. ಸ್ನೇಹಕೂಟ ಸಂಚಾಲಕಿ ಭಾರತಿ ವಿ. ಮಯ್ಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಅರುಣಾಚಲ ಮಯ್ಯ, ವಿಷ್ಣುಮೂರ್ತಿ ಮಯ್ಯ, ಮಹಾಲಕ್ಷ್ಮೀ ಉರಾಳ, ರಾಜೇಂದ್ರ ಉರಾಳ ಉಪಸ್ಥಿತರಿದ್ದರು. ವನೀತಾ ಉಪಾಧ್ಯಾ ಸ್ವಾಗತಿಸಿದರು. ಸ್ಮಿತಾರಾಣಿ ವಂದಿಸಿದರು. ಸುಜಾತಾ ಎಂ. ಬಾಯರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net