ಅಂಧರಿಗೆ ಅನುಕಂಪದ ಬದಲು ಸ್ವಾವಲಂಬಿಯಾಗಿಸಿ; ಪ್ರಕಾಶ ಕೋಳಿವಾಡ ಹೇಳಿಕೆ

9-RNR-03
Published on

ರಾಣೆಬೆನ್ನೂರ: ಅಂಧ ಮಕ್ಕಳಿಗೆ ಅನುಕಂಪದ ಬದಲು ಗುಣಮಟ್ಟದ ಶಿಕ್ಷಣ ನೀಡಿ ಸಮಾಜದಲ್ಲಿ ಅವರು ಕೂಡ ಸ್ವಂತ ಉದ್ಯೋಗ ಕಂಡುಕೊಂಡು ಸ್ವಾವಲಂಬಿಯಾಗಿ ಬದುಕುವಂತೆ ಮಾಡಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಸ್ನೇಹ ದೀಪ ಅಂಧ ಅಂಗವಿಕಲರ ಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ 7ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯ ಧರ್ಮದರ್ಶಿ ಕೆ.ಜಿ. ಮೋಹನ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್ ತರಬೇತಿಯಲ್ಲಿ ತೇರ್ಗಡೆಯಾದ ಶಿಬಿರಾರ್ಥಿಗಳಿಗೆ ಶಾಸಕ ಪ್ರಕಾಶ ಕೋಳಿವಾಡ ಪ್ರಮಾಣ ಪತ್ರ ಹಾಗೂ ಸ್ಮಾರ್ಟ್ ಗ್ಲಾಸ್ ವಿತರಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಡಾ. ಗಿರೀಶ ಕೆಂಚಪ್ಪನವರ, ಸುಧೀರ ಕುರುವತ್ತಿ, ಶೋಭಾ ಮಠಪತಿ, ವಸಂತ ಹುಲ್ಲತ್ತಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net