ಮಹಿಳೆ ಕತ್ತಿನಿಂದ ಸರ ಕಸಿದು ಪರಾರಿ

Chain Snatch
Published on

ಕಾಸರಗೋಡು: ಚಂದೇರ ಪೊಲೀಸ್​ ಠಾಣೆ ವ್ಯಾಪ್ತಿಯ ಪಿಲಿಕ್ಕೋಡ್​ ಏಚಿಕೊವ್ವಲ್​ ಪ್ರದೇಶದಲ್ಲಿ ಬೈಕಲ್ಲಿ ಆಗಮಿಸಿದ ತಂಡ ಪಿ.ಶಾರದಾ ಎಂಬುವರ ಒಂದೂ ಮುಕ್ಕಾಳು ಪವನಿನ ಚಿನ್ನದ ಸರ ಕಸಿದು ಪರಾರಿಯಾದ್ದು, ಇವರ ಸಿಸಿ ಕ್ಯಾಮರಾ ದೃಶ್ಯಾವಳಿ ಹಲವು ದಿವಸಗಳ ನಂತರ ಪೊಲೀಸರಿಗೆ ಲಭಿಸಿದೆ.

ಡಿ.7ರಂದು ಕಳವು ನಡೆದಿದ್ದು, ಆರೋಪಿಗಳನ್ನು ಕೊಯಂಬತ್ತೂರು ನಿವಾಸಿಗಳೆಂದು ಸಂಶಯಿಸಲಾಗಿದ್ದು, ಇವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ನಕಲಿ ನಂಬರ್​ಪ್ಲೇಟ್​ ಅಳವಡಿಸಿ ಬೈಕ್​ಗಳಲ್ಲಿ ಸುತ್ತಾಡುವ ತಂಡ, ಒಂಟಿ ಮಹಿಳೆಯರ ಕತ್ತಿನಿಂದ ಸರ ಕಸಿದು ಪರಾರಿಯಾಗುತ್ತಿರುವುದಾಗಿ ಮಾಹಿತಿಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net