ಆಟಗಳಿಂದ ಸಕಾರಾತ್ಮಕ ಚಿಂತನೆ : ಗಣೇಶ್ ರೈ ಅನಿಸಿಕೆ

sports
Published on

ಪೆರ್ಲ: ಇಲ್ಲಿನ ಎಸ್‌ಎನ್‌ಎಎಲ್‌ಪಿ ಶಾಲೆಯ ಒಲಿಂಪಿಕ್ಸ್ ಮಂಗಳವಾರ ಆರಂಭಗೊಂಡಿತು. ರಾಷ್ಟ್ರೀಯ ವಾಲಿಬಾಲ್ ಆಟಗಾರ ಗಣೇಶ್ ರೈ ಉದ್ಘಾಟಿಸಿ, ಆಟಗಳು ಮನಸ್ಸನ್ನು ಆನಂದಗೊಳಿಸುವುದರೊಂದಿಗೆ ನಮ್ಮನ್ನು ಸಕಾರಾತ್ಮಕ ಚಿಂತನೆಗಳಿಗೆ ಪ್ರೇರೇಪಿಸುತ್ತದೆ ಎಂದರು.

ಶಾಲಾ ಸ್ಪೋರ್ಟ್ಸ್ ಕೌನ್ಸಿಲ್ ಅಧ್ಯಕ್ಷ ಹಮೀದ್ ಕುರೆಡ್ಕ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸತ್ಯನಾರಾಯಣ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ, ನಿವೃತ್ತ ಶಿಕ್ಷಕಿ ಸುಶೀಲಾ, ಜನಾರ್ದನ ಸೇರಾಜೆ, ಪ್ರೌಢಶಾಲಾ ಪಿಟಿಎ ಅಧ್ಯಕ್ಷ ನಾರಾಯಣ ನಾಯಕ್ ನಲ್ಕ ಶುಭಾಶಂಸನೆಗೈದರು.

ಪ್ರೌಢಶಾಲಾ ದೈಹಿಕ ಶಿಕ್ಷಕ ಬಾಲಕೃಷ್ಣ ಅವರನ್ನು ಅಭಿನಂದಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜೇಶ್ ಬಜಕೂಡ್ಲು, ಗಣರಾಜ್ ಪಳ್ಳತ್ತಡ್ಕ, ಚಂದ್ರ ಪೆರ್ಲ ರಝಾಕ್, ಮಂಜು ಪೆರ್ಲ ಮುಂತಾದವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಉದಯ ಸಾರಂಗ ಸ್ವಾಗತಿಸಿದರು. ಸಂಧ್ಯಾ ವಂದಿಸಿದರು. ಕಲಂದರ್ ಬೀಬಿ ಕಾರ್ಯಕ್ರಮ ನಿರೂಪಿಸಿದರು. ಆಕರ್ಷಕ ಮೆರವಣಿಗೆಯ ಪಥಸಂಚಲನದೊಂದಿಗೆ ಶಾಲಾ ಒಲಿಂಪಿಕ್ ಆರಂಭಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net