ಪ್ರಕೃತಿ ಸಮತೋಲನಕ್ಕೆ ಉರಗ ಸಹಕಾರಿ

mm 16-6
Published on

ವಿಜಯಪುರ : ಉರಗಗಳು ಪ್ರಕೃತಿ ಸಮತೋಲನಕ್ಕೆ ಅತ್ಯಂತ ಸಹಕಾರಿ. ಉರಗಗಳ ಬಗ್ಗೆ ನಾವು ಅರಿವು ಹೊಂದಬೇಕು. ಉರಗದ ವಿಷ ಹಲವು ಔಷಧಗಳಿಗೆ ಅತ್ಯವಶ್ಯಕ ಎಂದು ಉರಗ ರಕ ಉಮೇಶ ಗಂಗ್ಯಾಗೋಳ ಹೇಳಿದರು.

ನಗರದ ವೇದ ಇಂಟರ್​ನ್ಯಾಷನಲ್​ ಪಬ್ಲಿಕ್​ ಸ್ಕೂಲ್​ನಲ್ಲಿ ವಿಶ್ವ ಸರ್ಪಗಳ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ಹಮ್ಮಿಕೊಂಡ ವಿದ್ಯಾರ್ಥಿಗಳಿಗೆ ಉರಗಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಪಗಳು ಪರಿಸರ ಸಮತೋಲನಕ್ಕೆ ಅತ್ಯಂತ ಅಗತ್ಯ ಜೀವಿಗಳು. ಅವುಗಳ ಸಂರಣೆ ನಮ್ಮ ಆದ್ಯ ಕರ್ತವ್ಯ. ಉರಗಳಿಗೆ ಭಯಭೀತರಾಗದೆ ಸಮಾಜದಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಸರ್ಪಗಳು ರೈತನ ಮಿತ್ರರಾಗಿದ್ದು, ಬೆಳೆ ಹಾನಿ ಮಾಡುವ ಇಲಿ ಮತ್ತು ಕೀಟಗಳನ್ನು ತಿನ್ನುತ್ತವೆ. ಆ ಮೂಲಕ ಬೆಳೆಗಳ ರಣೆಗೆ ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲ ಹಾವುಗಳು ವಿಷಕಾರಿ ಅಲ್ಲ. ಸರ್ಪಗಳನ್ನು ಕೊಲ್ಲುವುದು ನೈತಿಕ ಮತ್ತು ಕಾನೂನು ಬದ್ಧವಾಗಿ ತಪ್ಪು ಎಂದರು.

ಅಧ್ಯತೆ ವಹಿಸಿದ್ದ ಶಿಣ ಸಂಸ್ಥೆ ಅಧ್ಯ ಡಾ. ಶಿವಾನಂದ ಕೆಲೂರ ಮಾತನಾಡಿ, ಸರ್ಪಗಳು ನಮ್ಮ ಆಚರಣೆಯಲ್ಲಿ ಮಹತ್ವದ ಸ್ಥಾನ ಪಡೆದಿವೆ. ದೈವತ್ವದ ಸಂಕೇತದಂತೆ ಅವುಗಳನ್ನು ಪೂಜಿಸಲಾಗುತ್ತದೆ. ನಾಗರ ಪಂಚಮಿ ಹಾವುಗಳ ಪೂಜೆಯೊಂದಿಗೆ ಆಚರಿಸುವ ಹಬ್ಬ. ಹಾಲನ್ನು ಎರೆದು ಭಕ್ತಿ ಪ್ರದರ್ಶನ ಮಾಡಲಾಗುತ್ತದೆ. ವಾಸ್ತವವಾಗಿ ಹಾವುಗಳ ವಿಷದಿಂದ ಔಷಧ ತಯಾರಿಸಲಾಗುತ್ತದೆ. ಹಾವುಗಳು ತಮಗೆ ಅಪಾಯವಾಗುವ ಸಂದರ್ಭದಲ್ಲಿ ಮಾತ್ರ ಪ್ರತಿಕ್ರಿಯಿಸುತ್ತವೆ. ಆದರೆ ನಾವು ತಿಳಿವಳಿಕೆ ಕೊರತೆಯಿಂದ ಅವುಗಳನ್ನು ಅಪಾಯಕಾರಿ ಎಂದು ಭಾವಿಸುತ್ತಿದ್ದೇವೆ. ಈ ಮನೋಭಾವದಿಂದ ನಾವೆಲ್ಲರೂ ಹೊರಬರಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಸುನೀಲ. ಬಿ.ಎಂ., ಉರಗಪ್ರೇಮಿ ನಿತಿನ್​, ಮಂಜೂರ ಕುಮಟೆ, ಸಿದ್ದು ಹಯ್ಯಾಳ, ಅಸ್ಲಾಂ ಕೊಣ್ಣೂರ ಮತ್ತಿತರರಿದ್ದರು. ಪವಿತ್ರ ಕೃಷ್ಣಮೂರ್ತಿ ನಿರೂಪಿಸಿದರು. ಕಲ್ಯಾಣಿ ಕಾಳೆ ವಂದಿಸಿದರು.

ವಿಜಯಪುರದ ವೇದ ಇಂಟರ್​ನ್ಯಾಷನಲ್​ ಪಬ್ಲಿಕ್​ ಸ್ಕೂಲ್​ನಲ್ಲಿ ವಿಶ್ವ ಸರ್ಪಗಳ ದಿನ ಆಚರಿಸಲಾಯಿತು. ಉಮೇಶ ಗಂಗ್ಯಾಗೋಳ, ಸುನೀಲ ಬಿ.ಎಂ., ನಿತಿನ್​ ಮತ್ತಿತರರಿದ್ದಾರೆ.

**

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net