ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಹಾವು ಪ್ರತ್ಯಕ್ಷ

ಕುಕಕೆ
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಯಾತ್ರಾ ಕ್ಷೇತ್ರ, ನಾಗರ ದೇವರ ಕ್ಷೇತ್ರವೆಂದು ಕರೆಸಿಕೊಂಡಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶನಿವಾರ ಒಂದು ಅಚ್ಚರಿ ಕಂಡುಬಂದಿದೆ. ದೇವಸ್ಥಾನದ ಹತ್ತಿರದಲ್ಲೇ ನಾಗರ ಹಾವೊಂದು ಪ್ರತ್ಯಕ್ಷವಾಗಿದ್ದು, ಭಕ್ತ ಸಮೂಹ ಅಚ್ಚರಿಯಿಂದ ನೋಡುವಂತಾಗಿದೆ.

ಶನಿವಾರ ಸಂಜೆಯ ವೇಳೆ ಹಾವು ಕಾಣಿಸಿಕೊಂಡಿದೆ. ಭಕ್ತರು ಜಮಾಯಿಸಿ ಭಕ್ತಿಯಿಂದ ಕೈ ಮುಗಿಯುವ ಹಾಗೂ ಮೊಬೈಲ್ ಗಳಲ್ಲಿ ಫೋಟೋ ತೆಗೆಯುವುದು ಕಂಡು ಬಂತು. ಹಾವು ಅದರಷ್ಟಕ್ಕೆ ಮುಂದುವರಿದು ಸಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net