ಅರಟಾಳ: ಹಾವು ಕಡಿತದಿಂದ ಯುವಕ ಸಾವು

Child Death 16 Jan 20
Published on

ಅರಟಾಳ: ಹಾವು ಕಚ್ಚಿ ಗ್ರಾಮದ ಯುವಕನೋರ್ವ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ. ಮಹಾದೇವ ಗೌರವ್ವ ಮಾದರ (34) ಮೃತ ಯುವಕ.

ಇವರ ತೋಟದಲ್ಲಿರುವ ಶೆಡ್‌ನಲ್ಲಿ ಹಾಸಿಗೆಯಲ್ಲಿ ಕುಳಿತಿದ್ದ ನಾಗರ ಹಾವು ಹಾಸಿಗೆ ತೆಗೆದುಕೊಳ್ಳುವ ವೇಳೆ ಮಹಾದೇವಗೆ ಕಚ್ಚಿದೆ. ಅಥಣಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಅಷ್ಟರೊಳಗಾಗಿ ಮೃತಪಟ್ಟಿದ್ದರು. ಐಗಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net