

ಕಾರವಾರ: ಹಾವು ಕಚ್ಚಿ ಅಸ್ವಸ್ಥಳಾಗಿದ್ದ ಹೈಸ್ಕೂಲ್ ಉದ್ಯೋಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಶಿರವಾಡದ ಕರ್ನಟಕ ಪಬ್ಲಿಕ್ ಸ್ಕೂಲ್ ನ ಡಿ ದರ್ಜೆಯ ನೌಕರಳಾಗಿದ್ದ ಆನಂದಿ ಕಾಣಕೋಣಕರ್ (46) ಮೃತಳು.
ಆಗಸ್ಟ್ 1 ರಂದು ಸಾಯಂಕಾಲ 4 ಗಂಟೆಯ ಹಿತ್ತಿಗೆ ಜನರೇಟರ್ ಕೊಠಡಿಯ ಸಮೀಪ ಅವರಿಗೆ ಹಾವು ಕಚ್ಚಿತ್ತು.
ಇದನ್ನೂ ಓದಿ: ಮಾಜಿ ಸಂಸದರ ಮಗನ ಖಾತೆಗೇ ಆನ್ಲೈನ್ ವಂಚಕರ ಕನ್ನ!
ಕ್ರಿಮ್ಸ್ ಆಸ್ಪತ್ರೆಯಲ್ಲಿ ನಾಲ್ಕು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.
ಕೆಲ ವರ್ಷಗಳ ಹಿಂದೆ ಪೊಲೀಸ್ ಇಲಾಖೆಯ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಅವರ ಪತಿ ಮೃತರಾಗಿದ್ದರು. ಅವರ ಅನುಕಂಪದ ಆಧಾರದ ನೌಕರಿ ಆನಂದಿ ಅವರಿಗೆ ದೊರಕಿತ್ತು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.