ಆಸ್ಪತ್ರೆ ವಾರ್ಡ್‌ನಲ್ಲೇ ಹಾವು ಕಡಿತ!

Crime
Published on

ಕಾಸರಗೋಡು: ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ತಾಲೂಕು ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದ ಪುತ್ರಿಯ ಆರೈಕೆಗೆ ಬಂದಿದ್ದ ತಾಯಿ ವಿಷಪೂರಿತ ಹಾವಿನ ಕಡಿತಕ್ಕೊಳಗಾಗಿದ್ದಾರೆ. ಗಾಯಳು ಚೆಂಬೇರಿ ನಿವಾಸಿ ಲತಾ(55)ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಗರ್ಭಿಣಿ ಪುತ್ರಿಯನ್ನು ದಾಖಲಿಸಿದ್ದ ಆಸ್ಪತ್ರೆ ವಾರ್ಡಿನಲ್ಲಿ ತಡರಾತ್ರಿ ಲತಾಗೆ ಹಾವು ಕಡಿದಿತ್ತು. ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾದರು. ವಿಷಯ ತಿಳಿದು ಧಾವಿಸಿದ ಸಿಬ್ಬಂದಿ ಹಾವನ್ನು ಹೊಡೆದು ಸಾಯಿಸಿದರು. ಗಾಯಾಳು ಚೇತರಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net