ಮುನವಳ್ಳಿ: ಶೇಂಗಾ ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಹಾವು ಕಚ್ಚಿ ರೈತ ಸಾವನ್ನಪ್ಪಿದ ಘಟನೆ ರಾಮದುರ್ಗ ತಾಲೂಕಿನ ಉಜ್ಜಿನಕೊಪ್ಪದಲ್ಲಿ ಶನಿವಾರ ಸಂಭವಿಸಿದೆ..ಮಲ್ಲಿಕಾರ್ಜುನ ಗದಿಗೆಪ್ಪ ದ್ಯಾಮನಗೌಡ್ರ (50) ಮೃತ ರೈತ. ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಕಟಕೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.