

ಬೆಂಗಳೂರು: ಸಂಗೀತ ಧಾಮ ವತಿಯಿಂದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಖ್ಯಾತ ಗಾಯಕ ಶ್ರೀಧರ್ ಅಯ್ಯರ್ 60ರ ಸಂಭ್ರಮ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಗೀತ ಧಾಮ ಹಾಗೂ ರೋಟರಿ ವತಿಯಿಂದ ಶ್ರೀಧರ್ ಅಯ್ಯರ್ ಅವರನ್ನು ಸನ್ಮಾನಿಸಲಾಯಿತು. ಮೃತ್ಯುಂಜಯ ದೊಡ್ಡವಾಡ ಸಂಗೀತ ನಿರ್ದೇಶನದಲ್ಲಿ "ಭಾವ ಶ್ರಾವಣ' ಕಾರ್ಯಕ್ರಮ ನಡೆಯಿತು. ಸಂಗೀತ ಧಾಮ ಹಾಗೂ ಸೃಜನ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ಗೀತ ನೃತ್ಯ, ಸಮೂಹ ಗಾಯನ ಮೂಡಿಬಂತು.
ಹಿರಿಯ ಕವಿ ಬಿ.ಆರ್.ಲಕ್ಷ$್ಮಣ್ರಾವ್, ಹಿರಿಯ ಸಾಹಿತಿ ನಾ.ದಾಮೋದರ ಶೆಟ್ಟಿ, ಅಂತಾರಾಷ್ಟ್ರೀಯ ತಬಲಾ ವಾದಕ ಡಾ.ಪಂಡಿತ್ ಸತೀಶ್ ಹಂಪಿಹೊಳಿ, ಕವಿ ಶೈಲೇಶ್ ಪಟ್ಟವರ್ಧನ್, ಪತ್ರಕರ್ತರಾದ ಜೆ.ಎಚ್.ಅನಿಲ್ ಕುಮಾರ್, ಕೆ.ಎನ್.ಜಯಸಿಂಹ ಇತರರಿದ್ದರು.