ಕಳ್ಳಬಟ್ಟಿ ಸಾಗಣೆ, ಇಬ್ಬರ ಬಂಧನ

17KOKATANUR1-Web
ಯಕ್ಕಂಚಿ ಗ್ರಾಮದ ಹೊರವಲಯದಲ್ಲಿ ಕಳ್ಳಬಟ್ಟಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.
Published on

ಕೊಕಟನೂರ: ಅಕ್ರಮವಾಗಿ ಕಳ್ಳಬಟ್ಟಿ ಸಾಗಿಸುತ್ತಿದ್ದ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಅಬಕಾರಿ ಪೊಲೀಸರು ಇಬ್ಬರನ್ನು ಬಂಧಿಸಿ, 7 ಲೀಟರ್ ಕಳ್ಳಬಟ್ಟಿ ಸರಾಯಿ ವಶಪಡಿಸಿಕೊಂಡಿದ್ದಾರೆ.

ಅಥಣಿ ತಾಲೂಕಿನ ಯಕ್ಕಂಚಿ ಗ್ರಾಮದ ಹೊರವಲಯದಲ್ಲಿ ಬೈಕ್‌ನಲ್ಲಿ ಗುರುವಾರ ಅಕ್ರಮವಾಗಿ ಕಳ್ಳಬಟ್ಟಿ ಸಾಗಿಸುತ್ತಿದ್ದ ಬಳವಾಡ ಗ್ರಾಮದ ಮುರುಗೇಶ ಶಿವಲಿಂಗ ಮುತ್ತೂರ ಎಂಬಾತನನ್ನು ಬಂಧಿಸಿದ್ದು, ಆತನಿಂದ 16,800 ರೂ. ಮೌಲ್ಯದ 5 ಲೀಟರ್ ಕಳ್ಳಬಟ್ಟಿ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ. ಅಥಣಿ ಅಬಕಾರಿ ವಲಯ ನಿರೀಕ್ಷಕ ಮಹೇಶ ಧೂಳಶೆಟ್ಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಯಬಾಗ ವರದಿ: ತಾಲೂಕಿನ ಮೊರಬ-ನಿಲಜಿ ರಸ್ತೆಯ ಶ್ಯಾಂಡಗೆ ತೋಟದ ಹತ್ತಿರ ಅಬಕಾರಿ ಅಧಿಕಾರಿಗಳು ಶುಕ್ರವಾರ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ಸಾಗಿಸುತ್ತಿದ ತಾಲೂಕಿನ ನಿಲಜಿ ಗ್ರಾಮದ ಮಾರುತಿ ಸದಾಶಿವ ಕುಂಬಾರ ಎಂಬಾತನನ್ನು ಬಂಧಿಸಿದ್ದಾರೆ. ಆತನಿಂದ 2 ಲೀಟರ್ ಸಾರಾಯಿ ಮತ್ತು ಬೈಕ್ ವಶಕ್ಕೆ ಪಡೆದಿದ್ದಾರೆ. ವಿಠ್ಠಲ ಬಸ್ತವಾಡೆ ಹಾಗೂ ನಾರಾಯಣ ನಿಕ್ಕಂ (ಪಾಟಗಾರ) ಪರಾರಿಯಾಗಿದ್ದಾರೆ. ಅಬಕಾರಿ ನಿರೀಕ್ಷಕ ಜಟ್ಟೆಪ್ಪ ಮಾಳಾಬಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net