ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

Arrest 5 Feb 20
Published on

ಖಾನಾಪುರ: ತಾಲೂಕಿನ ನಿಟ್ಟೂರ ಗ್ರಾಮದಲ್ಲಿ ಬುಧವಾರ ಖಾನಾಪುರ ಪೊಲೀಸರು ನಡೆಸಿದ ದಾಳಿಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಮದ್ಯ ತಯಾರಿಸಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಅದೇ ಗ್ರಾಮದ ಶಿವಾಜಿ ಹಂಡಿ ಹಾಗೂ ಭರಮಾಣಿ ನಾಯಕ್ ಬಂಧಿತರು. ಇವರಿಂದ 8 ಲೀಟರ್ ಕಳ್ಳಬಟ್ಟಿ ಮದ್ಯ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಖಾನಾಪುರ ಪೊಲೀಸರು ತಿಳಿಸಿದ್ದಾರೆ.

ಟ್ರಾೃಕ್ಟರ್ ವಶ: ಖಾನಾಪುರ ತಾಲೂಕಿನ ತೋಪಿನಕಟ್ಟಿ ಗ್ರಾಮದ ಬಳಿ ಪೊಲೀಸರು ಅಕ್ರಮವಾಗಿ ಮರಳು ತುಂಬಿ ಸಾಗಿಸುತ್ತಿದ್ದ ಟ್ರಾೃಕ್ಟರ್ ವಶಕ್ಕೆ ಪಡೆದಿದ್ದಾರೆ. ತೋಪಿನಕಟ್ಟಿ ಗ್ರಾಮದ ಶಂಕರ ಹೊಸೂರಕರ ಬಂಧಿತ ವ್ಯಕ್ತಿ. ಮರಳು ಸಾಗಿಸುತ್ತಿದ್ದ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಖಾನಾಪುರ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net