ಕಳ್ಳಬಟ್ಟಿ ಮಾರಾಟ ಓರ್ವನ ಸೆರೆ

swamiji arrest
Published on

ನೇಸರಗಿ: ಸಮೀಪದ ಮೊಹರೆ ಗ್ರಾಮದಲ್ಲಿ ಕಳ್ಳಬಟ್ಟಿ ಸಾರಾಯಿ ಮಾರುತ್ತಿದ್ದ ಗ್ರಾಮದ ಬಸವರಾಜ ಸಿದ್ದಪ್ಪ ಹೊಸಕೋಟಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 1,500 ಲೀಟರ್ ಕಳ್ಳಬಟ್ಟಿ ಸಾರಾಯಿ ವಶಪಡಿಸಿಕೊಂಡಿದ್ದಾರೆ. ನೇಸರಗಿ ಠಾಣೆ ಪಿಎಸ್‌ಐ ವೈ.ಎಲ್.ಶೀಗಿಹಳ್ಳಿ, ಸಿಬ್ಬಂದಿ ಕೆ.ಆರ್. ಮುನವಳ್ಳಿ, ಆರ್.ಕೆ. ಉದಪುಡಿ, ಆರ್. ವಿ. ಜಮ್ಮಾಯಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ನೇಸರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net