ಕಳ್ಳಬಟ್ಟಿ ಸಾರಾಯಿ ವಶ, ಇಬ್ಬರ ಬಂಧನ

kallabatti_bgv
Published on

ಬೆಳಗಾವಿ: ತಾಲೂಕಿನ ಗೋಜಗಾ ಗ್ರಾಮದಲ್ಲಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕಾಕತಿ ಠಾಣೆ ಪೊಲೀಸರು ಬಂಧಿಸಿ 10 ಲೀಟರ್ ಕಳ್ಳಬಟ್ಟಿ ವಶಪಡಿಸಿಕೊಂಡಿದ್ದಾರೆ.

ಗೋಜಗಾ ಗ್ರಾಮದ ನಾರಾಯಣ ನಾನಪ್ಪಾ ನಾಯಿಕ (40), ರಾಜು ಪುನ್ನಪ್ಪ ನಾಯಿಕ (40) ಬಂಧಿತರು. ಗ್ರಾಮದಲ್ಲಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರು ನೀಡಿದ ದೂರಿನ ಆಧಾರದ ಮೇಲೆ ದಾಳಿ ನಡೆಸಿ 800 ರೂ. ಮೌಲ್ಯದ 10 ಲೀಟರ್ ಕಳ್ಳಬಟ್ಟಿ ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಠಾಣೆ ಪೊಲೀಸರು ತಿಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net