ಸ್ಪರ್ಧೆಯಿಂದ ಅಂತಃಸತ್ತ್ವ ವೃದ್ಧಿ: ರಾಮಕೃಷ್ಣ ಭಟ್

udp-4-smsp
Published on

ಉಡುಪಿ: ಸ್ಪರ್ಧೆಯು ಒಂದು ಸಾತ್ವಿಕವಾದ ಯುದ್ಧದಂತೆ. ಪೂರ್ಣತಯಾರಿಯೊಂದಿಗೆ ಪ್ರಯತ್ನವು ನಿರ್ಣಾಯಕರಿಗೆ ತೀರ್ಪನ್ನು ನೀಡುವಲ್ಲಿ ಅತ್ಯಂತ ಕಷ್ಟಕರವಾಗುವಂತಿರಬೇಕು. ಇದರಿಂದ ಸ್ಪರ್ಧಾಳುಗಳ ಆತ್ಮವಿಶ್ವಾಸ ಹೆಚ್ಚುತ್ತದೆ. ಅಂತಃಸತ್ತ್ವವನ್ನು ವರ್ಧಿಸುವಲ್ಲಿ ಸ್ಪರ್ಧೆಗಳು ಮಹತ್ತರಪಾತ್ರವನ್ನು ವಹಿಸುತ್ತವೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪರೀಕ್ಷಾಂಗ ನಿರ್ದೇಶಕ ಡಾ. ಕೆ. ರಾಮಕೃಷ್ಣಭಟ್ ಹೇಳಿದರು.

ಸೋಮವಾರ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕ ಸಂಸ್ಕೃತ ಅಧ್ಯನಕೇಂದ್ರದಲ್ಲಿ ನಡೆದ ಸಂಸ್ಕೃತೋತ್ಸವ ಉದ್ಘಾಟಿಸಿ ಮಾತನಾಡಿದರು. ಎಸ್.ಎಮ್.ಎಸ್.ಪಿ. ಸಭಾ ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಸತ್ಯನಾರಾಯಣ ವೆಂಕಟರಾವ್, ವೇದಾಂತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಷಣ್ಮುಖ ಹೆಬ್ಬಾರ್ ಉಪಸ್ಥಿತರಿದ್ದರು. ಡಾ.ಮಹೇಂದ್ರ ಸೋಮಯಾಜೀ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಸ್ವಾತೀ ಪ್ರಾರ್ಥಿಸಿದರು. ಡಾ.ಷಣ್ಮುಖ ಹೆಬ್ಬಾರ್ ಸ್ವಾಗತಿಸಿದರು. ವಿದ್ವಾನ್ ರಾಧೇಶ ಆಚಾರ್ಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net