

ಉಡುಪಿ: ಆಗಮಡಂಬರ ಎಂಬ ಸಂಸತನಾಟಕವು ನಾಟಕಸಾಹಿತ್ಯಗಳಲ್ಲೇ ಒಂದು ಅಪೂರ್ವಕೃತಿಯಾಗಿದೆ. ದೇಶದ ಮತೀಯ ಮತ್ತು ಸಾಂಸತಿಕ ವೈಚಾರಿಕ ವಿವಿಧತೆಯಲ್ಲಿ ಏಕತೆಗೆ ಈ ನಾಟಕ ಕೈಗನ್ನಡಿಯಾಗಿದೆ ಎಂದು ಪೂರ್ಣಪ್ರಜ್ಞ ಕಾಲೇಜಿನ ಪ್ರಾಧ್ಯಾಪಕ ಓಂಪ್ರಕಾಶ ಭಟ್ ಅಭಿಪ್ರಾಯಪಟ್ಟರು.
ಮನ್ಮಧ್ವಸಿದ್ಧಾಂತಪ್ರಬೋಧಕ ಸಂಸತಕಾಲೇಜಿನಲ್ಲಿ ಕಾವ್ಯಶಾಸ್ತ್ರ ವಿಚಾರಪರಿಷತ್ತಿನ ವತಿಯಿಂದ ನಡೆದ ದತ್ತಿಉಪನ್ಯಾಸದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಮಾತನಾಡಿದರು. ಜಯಂತಭಟ್ಟ ಎಂಬ ವಿದ್ವಾಂಸ ಆಗಮಡಂಬರ@ ಎಂಬ ಸಂಸತ ನಾಟಕವನ್ನು ಸುಮಾರು ಕ್ರಿ.ಶ. 9ನೇ ಶತಮಾನದಲ್ಲಿ ರಚಿಸಿದ್ದು, ನಾಟಕವು ಏಕತೆ ಮತ್ತು ಸಾಮರಸ್ಯದ ಜೀವನಕ್ಕೆ ಒತ್ತುನಿಡಿದೆ. ವಿವಿಧ ಧರ್ಮ ಮತ್ತು ಮತ ದರ್ಶನಗಳ ನೆಲೆವೀಡು ಈ ತುಳುನಾಡು. ನಾಟಕ ನಿರೂಪಿಸಿದ ಸಾಮರಸ್ಯದ ಜೀವನಶೈಲಿಯನ್ನು ತುಳುನಾಡಿನಲ್ಲಿ ಕಾಣಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಸತ್ಯನಾರಾಯಣ ವೆಂಕಟರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು. ವಿದ್ವಾನ್ ರಾಧೇಶ ಆಚಾರ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುದೀಕ್ಷಾ ಪ್ರಾರ್ಥಿಸಿದರು. ವಿದ್ಯಾರ್ಥಿ ಆದಿತ್ಯಕೃಷ್ಣ ವಂದಿಸಿದರು. ವಿದ್ಯಾರ್ಥಿ ಹೇಮಂತಕೃಷ್ಣ ಕಾರ್ಯಕ್ರಮ ನಿರೂಪಿಸಿದರು.