ಮುಷ್ಕರಕ್ಕೆ ನೈತಿಕ ಬೆಂಬಲದೊಂದಿಗೆ ಕರ್ತವ್ಯ ನಿರ್ವಹಣೆ

17SPT2
Published on

ಸೋಮವಾರಪೇಟೆ : ಕೋಲ್ಕತಾದ ಆರ್‌ಜಿಆರ್ ವೈದ್ಯಕೀಯ ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿದ್ದ ವೈದ್ಯೆಯ ಮೇಲೆ ನಡೆದ ಅತ್ಯಾಚಾರ, ಹತ್ಯೆ ಖಂಡನೀಯ ಎಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞ ಡಾ. ಶಿವಪ್ರಸಾದ್ ಹೇಳಿದರು. ಭಾರತೀಯ ವೈದ್ಯಕೀಯ ಸಂಘ ಶನಿವಾರ ನೀಡಿದ್ದ ಕರೆಯನ್ವಯ ಮುಷ್ಕರಕ್ಕೆ ವೈದ್ಯರು ಕಪ್ಪುಪಟ್ಟಿ ಧರಿಸಿ ಬೆಂಬಲ ವ್ಯಕ್ತಪಡಿದ ಸಂದರ್ಭ ಅವರು ಮಾತನಾಡಿದರು. ತುರ್ತು ಇರುವ ರೋಗಿಗಳಿಗೆ ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯ. ಆಸ್ಪತ್ರೆಗೆ ಬಂದ ರೋಗಿಗಳನ್ನು ಹಿಂದಕ್ಕೆ ಕಳುಹಿಸಲು ಸಾಧ್ಯವಾಗದ ಸ್ಥಿತಿ ಇದ್ದ ಕಾರಣ ನಾವೆಲ್ಲರೂ ಕಪ್ಪು ಪಟ್ಟಿ ಧರಿಸಿ, ಮುಷ್ಕರಕ್ಕೆ ನೈತಿಕ ಬೆಂಬಲ ನೀಡಿ ಅಗತ್ಯ ಸೇವೆ ಸಲ್ಲಿಸಿದ್ದೇವೆ ಎಂದರು.
ದುಷ್ಕರ್ಮಿಗಳ ಕೃತ್ಯ ದಾಳಿ ಖಂಡಿಸಿ ಸರ್ಕಾರಿ ಆಸ್ಪತ್ರೆಯ ವೈದ್ಯರು, ಖಾಸಗಿ ವೈದ್ಯರು, ಸಿಬ್ಬಂದಿ ತಮ್ಮ ಕೈಗೆ ಕಪ್ಪು ಪಟ್ಟಿ ಧರಿಸಿ ಅಗತ್ಯ ಸೇವೆ ನೀಡಿದ್ದು ಗಮನ ಸೆಳೆಯಿತು. ರೋಗಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net