

ಸರ್ಕಾರಿ ನೌಕರರ ಸಂಘದ ಚುನಾವಣೆ
ಸೋಮವಾರಪೇಟೆ: ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಸಂಬಂಧ ಪಟ್ಟಂತೆ ಚುನಾವಣಾ ಪ್ರಕ್ರಿಯೆ ಸೋಮವಾರ ಆರಂಭಗೊಂಡಿದೆ. ತಾಲೂಕು ಘಟಕದ ಚುನಾವಣೆಗೆ ಮಂಗಳವಾರ ಒಟ್ಟು 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಗಳಾದ ಕೆಂಚೇಗೌಡ ಮತ್ತು ಮಹೇಶ್ ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸಿದರು.ನಾಮಪತ್ರ ಹಿಂತೆಗೆಯಲು ಅ. 19 ಕೊನೆಯ ದಿನ. ಅ. 28ರಂದು ಚುನಾವಣೆ ನಡೆಯಲಿದೆ.