ಸೋಮವಾರಪೇಟೆಯಲ್ಲಿ ನವರಾತ್ರಿ ಪೂಜೆಗೆ ತೆರೆ

14SPT1
Published on

ಸೋಮವಾರಪೇಟೆ : ಕಿಬ್ಬೆಟ್ಟ ಗ್ರಾಮದ ಭಗವತಿ ದೇವಾಲಯದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ 9 ದಿನಗಳ ಕಾಲ ಪೂಜಿಸಿದ್ದ ಶ್ರೀ ನವದುರ್ಗಾ ಮಾತೆ ಉತ್ಸವ ಮೂರ್ತಿಯನ್ನು ಹಾರಂಗಿ ನದಿಯಲ್ಲಿ ಶನಿವಾರ ಸಂಜೆ ವಿಸರ್ಜಿಸಲಾಯಿತು. ಈ ಮೂಲಕ ನವರಾತ್ರಿ ಉತ್ಸವ ಮತ್ತು ಪೂಜಾದಿಗಳಿಗೆ ತೆರೆ ಎಳೆಯಲಾಯಿತು.
ಪ್ರಧಾನ ಅರ್ಚಕ ಮನೋಜ್ ಭಟ್ ಅವರ ಪೌರೋಹಿತ್ಯದಲ್ಲಿ ನವದುರ್ಗಾ ಮಾತೆಗೆ 9 ದಿನಗಳ ಕಾಲ ಅಲಂಕಾರದೊಂದಿಗೆ ವಿಶೇಷ ಪೂಜೆ ಮತ್ತು ಹೋಮ ನಡೆಸಲಾಗಿತ್ತು. ಈ ಸಂದರ್ಭ ಪ್ರಮುಖರಾದ ಮಧು, ಗಣಪತಿ, ರವಿ, ಕುಶಾಲಪ್ಪ, ಮುರಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net