ಸಮಾಜ ಸೇವೆಯಿಂದ ಉತ್ತಮ ಫಲ

08SPT01
Published on

ಸೋಮವಾರಪೇಟೆ : ಸಮಾಜಕ್ಕೆ ಮಾಡಿದ ಸೇವೆ, ದಾನ ಮತ್ತು ಧರ್ಮಗಳ ಫಲ ನಾವು ಜೀವಂತವಾಗಿರುವಾಗಲೇಇನ್ನೊಂದು ರೀತಿಯಲ್ಲಿ ನಮಗೆ ವರವಾಗಿ ದೊರಕುತ್ತದೆ ಎಂದು ಲಯನ್ಸ್ ಜಿಲ್ಲಾ ಪ್ರಾಂತಪಾಲ ಡಾ. ಮೆಲ್ವಿನ್ ಡಿಸೋಜಾ ಹೇಳಿದರು. ಸೋಮವಾರಪೇಟೆ ಲಯನ್ಸ್ ವತಿಯಿಂದ ಒಕ್ಕಲಿಗರ ಸಮುದಾನ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಾಂತಪಾಲರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಬಡವರ ಸೇವೆ ಮಾಡುತ್ತಿದೆ. ಸಂಸ್ಥೆ ಸದಸ್ಯರು ನೀಡುವ ಧನಸಹಾಯ ನಿಜವಾದ ಬಡವರಿಗೆ, ನೊಂದವರಿಗೆ ತಲುಪುತ್ತಿದೆ. ಹುಟ್ಟು- ಸಾವಿನ ನಡುವೆ ಜನರ ಮನದಲ್ಲಿ ಉಳಿಯುವ ಸೇವೆ ಮಾಡಿದಲ್ಲಿ ಬದುಕು ಸಾರ್ಥಕವಾಗುತ್ತದೆ ಎಂದರು. ಸಂಘ- ಸಂಸ್ಥೆಗಳು ಇಂಥ ಕಾರ್ಯದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರೆ ನಾಡಿನ ಅಭಿವೃದ್ಧಿ ಸಾಧ್ಯ ಎಂದರು. ಲಯನ್ಸ್ ಘಟಕ ಅಧ್ಯಕ್ಷ ಎ.ಎಸ್.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಕೆ.ಡಿ. ವೀರಪ್ಪ, ಪ್ರಾಂತೀಯ ಅಧ್ಯಕ್ಷ ಅಂಬೆಕಲ್ ನವೀನ್, ವಲಯಾಧ್ಯಕ್ಷ ರೋಹಿತ್, ಜಿಲ್ಲಾ ಲಿಯೋ ಅಧ್ಯಕ್ಷೆ ರಂಜಿತಾ ಶೆಟ್ಟಿ, ಕಾರ್ಯದರ್ಶಿ ಸಿ.ಕೆ. ಶಿವ ಕುಮಾರ್, ಪ್ರತೀಕ್ಷಾ ಇತರರು ಇದ್ದರು. ದಾನಿ ಎ.ಪಿ.ಶಂಕರಪ್ಪ, ಶಾರದ ದಂಪತಿಗೆ ಸನ್ಮಾನಿಸಿಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net