

ಸೋಮವಾರಪೇಟೆ : ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಜಂಕ್ಷನ್ ಬಳಿ ಸೋಮವಾರ ಬೆಳ್ಳಂಬೆಳಗ್ಗೆ ಎರಡು ಕಾಡಾನೆಗಳು ಕಾಣಿಸಿಕೊಂಡ ಪರಿಣಾಮ ವಾಹನ ಚಾಲಕರು ಭಯಗೊಂಡಿದ್ದರು.
ಕಾಜೂರು, ಯಡವನಾಡು ಮೀಸಲು ಅರಣ್ಯ ಸುತ್ತ ರೈಲ್ವೆ ಬ್ಯಾರಿಕೇಡ್ ಅಳವಡಿಸಿದ್ದರೂ ಕಾಡಾನೆಗಳು ಹೈವೇ ರಸ್ತೆಯಲ್ಲಿ ಕಾಣಿಸಿಕೊಂಡು ಭಯ ಹುಟ್ಟಿಸುತ್ತಿವೆ. ಕೆಲವು ಕಡೆ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಳ್ಳದ ಜಾಗದಲ್ಲಿ ಕಾಡಾನೆಗಳು ಗ್ರಾಮಗಳತ್ತ ಬರುತ್ತಿವೆ. ಮೀಸಲು ಅರಣ್ಯ ಪೂರ್ಣ ಒಣಗಿದ್ದು, ಅರಣ್ಯದೊಳಗೆ ನೀರಿನ ಕೊರತೆಯಿಂದ ಕಾಡು ಬಿಟ್ಟು ಗ್ರಾಮದೊಳಗೆ ಕಾಡಾನೆಗಳು ಗ್ರಾಮದೊಳಗೆ ಓಡಾತ್ತಿವೆ. ಕಾಡಾನೆಗಳ ಕಾಟಕ್ಕೆ ರೈತರು ಹೈರಾಣಾಗಿದ್ದಾರೆ. ಕಾಡಾನೆಗಳ ವಾಕಿಂಗ್ ಅನ್ನು ವಾಹನ ಚಾಲಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.