ಜಯವೀರಮಾತೆ ವಾರ್ಷಿಕೋತ್ಸವ

25spt3
Published on

 ಸೋಮವಾರಪೇಟೆ : ಜಯವೀರಮಾತೆ ವಾರ್ಷಿಕೋತ್ಸವ ಚರ್ಚ್‌ನ ಸಭಾಂಗಣದಲ್ಲಿ ಶ್ರದ್ಧಾಭಕ್ತಿಯಿಂದ ಶನಿವಾರ ಸಂಜೆ ನೆರವೇರಿತು. ಧರ್ಮಕ್ಷೇತ್ರದ ವಿಶ್ರಾಂತ ಮಹಾ ಧರ್ಮಾಧ್ಯಕ್ಷ ಡಾ.ಬರ್ನಾಡ್ ಮೊರಾಸ್ ಅವರು ದಿವ್ಯ ಬಲಿಪೂಜೆಯೊಂದಿಗೆ ಕಾರ್ಯಕ್ರಮ ಚಾಲನೆ ಪಡೆಯಿತು. ನೂರಾರು ಭಕ್ತರು ಸಾಮೂಹಿಕವಾಗಿ ದೇವರನ್ನು ಸ್ತುತಿಸಿದರು. ಶೃಂಗಾರಭರಿತ ತೇರಿನ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ನಂತರ ಚರ್ಚ್‌ನಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಮಡಿಕೇರಿ ವಲಯ ಧರ್ಮಗುರು ಜಾರ್ಜ್ ದೀಪಕ್, ಸೋಮವಾರಪೇಟೆ ಧರ್ಮಗುರು ಅವಿನಾಶ್ ಸೇರಿದಂತೆ ವಿವಿಧ ಚರ್ಚ್‌ಗಳ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net