

ಸೋಮವಾರಪೇಟೆ : ಸಾಲ ಯೋಜನೆಗಳು ಸದುಪಯೋಗ ಆಗಬೇಕು ಎಂದರೆ ಮರುಪಾವತಿಯೂ ಸೂಕ್ತ ಸಮಯದಲ್ಲಿ ನಡೆಯಬೇಕು ಎಂದು ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿ ಶ್ರೀನಿವಾಸ್ ಹೇಳಿದರು. ಯೂನಿಯನ್ ಬ್ಯಾಂಕ್ ಮತ್ತು ಲೀಡ್ ಬ್ಯಾಂಕ್ ಸಂಯುಕ್ತವಾಗಿ ತಾಲೂಕಿನ ಗರಗಂದೂರು ಗ್ರಾಮದ ಸಮುದಾಯಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಮಹಿಳೆಯರಿಗೆ ಹಣಕಾಸು ಸಾಕ್ಷರತಾ ಸಪ್ತಾಹ’ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು. ಗೃಹಿಣಿಯರಿಗಾಗಿ ಕ್ರೆಡಿಟ್ ಸ್ಕೋರ್ ಉತ್ತಮಪಡಿಸಿಕೊಳ್ಳುವಿಕೆ ಸೇರಿದಂತೆ ಹಲವಾರು ಮಾಸಿಕ ಉಳಿತಾಯ ಯೋಜನೆ, ಫಿಕ್ಸೆಡ್ ಡಿಪಾಸಿಟ್ ಇತ್ಯಾದಿ ಸೌಕರ್ಯಗಳಿವೆ ಎಂದವರು ವಿವರಿಸಿದರು.
ಮಾಸಿಕ ಉಳಿತಾಯ ಮಾಡಿ: ಆರ್ಥಿಕ ಸಾಕ್ಷರತಾ ಸಮಾಲೋಚಕ ಸಿ.ಜಿ. ಹರೀಶ್ ಮಾತನಾಡಿ, ಕುಟುಂಬ ಮತ್ತು ಭವಿಷ್ಯದ ಭದ್ರತೆಗೆ ಮಾಸಿಕ 500 ರೂ. ಗಳನ್ನಾದರೂ ಉಳಿತಾಯ ಮಾಡುವಲ್ಲಿ ಮಹಿಳೆಯರು ಮುಂದಾಗಬೇಕು ಎಂದರು.