ವಿರಾಜಪೇಟೆಯಲ್ಲಿ ಸುಗಮ ಸಂಚಾರಕ್ಕೆ ಅಡೆತಡೆ

12 vpt. 4
ಚೇಂಬರ್ ಆಫ್ ಕಾಮರ್ಸ್ ವಿರಾಜಪೇಟೆ ಸ್ಥಾನೀಯ ಶಾಖೆಯ ಪದಾಧಿಕಾರಿಗಳ ಸಲ್ಲಿಸಿದ ಮನವಿ ಪತ್ರವನ್ನು ಸ್ವೀಕರಿಸಿ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿದರು. ಕೆ.ಇ.ಶಾಹುಲ್ ಹಮೀದ್, ಎ.ಎನ್.ರವಿ ಉತ್ತಪ್ಪ, ಎಸ್.ಎಚ್.ಮಂಜುನಾಥ್, ಬಿ.ಎಂ.ಸುರೇಶ್, ಕೋಲತಂಡ ಬೋಪಯ್ಯ, ಮಾಳೇಟಿರ ಕೆ.ಬೋಪಣ್ಣ, ಆರ್.ಕೆ.ಅಬ್ದುಸ್ಸಲಾಂ, ಎಸ್.ಎ.ಅಬ್ದುಲ್ ರವೂಫ್ ಇದ್ದರು.
Published on

ವಿರಾಜಪೇಟೆ: ವಿರಾಜಪೇಟೆ ಪಟ್ಟಣ ದಿನದಿಂದ ದಿನಕ್ಕೆ ಬೆಳೆವಣಿಗೆಯಿಂದ ವಾಹನ ದಟ್ಟಣೆ ಹಾಗೂ ಸುಗಮ ಸಂಚಾರಕ್ಕೆ ಉಂಟಾಗುತ್ತಿರುವ ಅಡಚಣೆಗಳನ್ನು ನಿವಾರಿಸುವಂತೆ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಶಾಖೆಯ ಪದಾಧಿಕಾರಿಗಳು ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿಯಾಗಿ ಸಲಹೆಗಳನ್ನು ಒಳಗೊಂಡ ಮನವಿ ಪತ್ರವನ್ನು ಶನಿವಾರ ನೀಡಿದರು.

ಮಡಿಕೇರಿ ಕಡೆಯಿಂದ ವಿರಾಜಪೇಟೆ ನಗರ ಮಾರ್ಗವಾಗಿ ಕೇರಳ ರಸ್ತೆಗೆ ತೆರಳುವ ವಾಹನಗಳನ್ನು ಮಠದ ಗದ್ದೆಯ ಬಲಭಾಗದಲ್ಲಿರುವ ಬಲ್ಲುಡ-ಅಮ್ಮಣಕುಟ್ಟಂಡ-ಪಿಂಟೋ-ಪಟ್ಟಡ ಮತ್ತು ನಡಿಕೇರಿಯಂಡ ಕುಟುಂಬದ ಕೃಷಿ ಭೂಮಿಗಾಗಿ ಆರ್ಜಿಗೆ ಸೇರುವ ಪರ್ಯಾಯ ಮಾರ್ಗ(ಬೈಪಾಸ್) ರಚನೆ ಮಾಡುವುದು, ಗೋಣಿಕೊಪ್ಪಲು ಕಡೆಯಿಂದ ಪಟ್ಟಣ ಮಾರ್ಗವಾಗಿ ಕೇರಳ ರಾಜ್ಯಕ್ಕೆ ತೆರಳುವ ವಾಹನಗಳಿಗಾಗಿ ಸರ್ವೋದಯ ಕಾಲೇಜಿನಿಂದ ಕಲ್ಲುಬಾಣೆಗಾಗಿ ಆರ್ಜಿಯ ಅನ್ವಾರುಲ್ ಹುದಾ ಸೇರುವ ಹೊಸ ಬೈಪಾಸ್ ರಸ್ತೆಯ ರಚನೆ ಮಾಡುವುದು, ಗೋಣಿಕೊಪ್ಪಲು ಕಡೆಯಿಂದ ವಿರಾಜಪೇಟೆ ನಗರ ಮಾರ್ಗವಾಗಿ ಮಡಿಕೇರಿಗೆ ತೆರಳುವ ಹೊರ ರಾಜ್ಯದ ವಾಹನಗಳಿಗೆ ದೊಡ್ಡಟ್ಟಿ ಚೌಕಿ-ಚರ್ಚ್ ರಸ್ತೆ-ಮಠದ ಗದ್ದೆ ಪೆಟ್ರೋಲ್ ಬಂಕ್ ಸೇರುವಂತೆ ಹೊಸ ಮಾರ್ಗಗಳ ಸಲಹೆಗಳನ್ನು ನೀಡಲಾಯಿತು.

ಉಳಿದಂತೆ ನಗರದ ಡೆಂಟಲ್ ಕಾಲೇಜಿನಿಂದ ಆರ್ಜಿವರೆಗಿನ ಮುಖ್ಯ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕುರಿತು ಸುದೀರ್ಘ ಚರ್ಚೆ ಮಾಡಲಾಯಿತು. ಅಭಿಪ್ರಾಯಗಳಿಗೆ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸರ್ಕಾರದಿಂದ ಈಗಾಗಲೇ ಹಣ ಬಿಡುಗಡೆಯಾಗಿದ್ದು ಈ ಬಗ್ಗೆ ಕಾನೂನು ಅಡ ತಡೆಗಳನ್ನು ಪರಿಹರಿಸಲು ಎಲ್ಲ ರೀತಿಯಲ್ಲಿ ಪ್ರಯತ್ನ ಮಾಡಲಾಗುವುದು, ರಸ್ತೆ ವಿಸ್ತರಣೆಯಿಂದ ವಾಸದ ಮನೆ ಸೇರಿದಂತೆ ಆಸ್ತಿ ಕಳೆದುಕೊಳ್ಳುವವರಿಗೆ ಸೂಕ್ತ ರೀತಿಯ ಪರಿಹಾರ ಒದಗಿಸಲೂ ಸಿದ್ಧರಿರುವುದಾಗಿ ತಿಳಿಸಿದರು.

ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಅಧ್ಯಕ್ಷ ಮಾದಪಂಡ ಕಾಶಿ ಕಾವೇರಪ್ಪ, ಉಪಾಧ್ಯಕ್ಷ ಕೆ.ಇ.ಶಾಹುಲ್ ಹಮೀದ್, ಪ್ರಧಾನ ಕಾರ್ಯದರ್ಶಿ ಎ.ಎನ್.ರವಿ ಉತ್ತಪ್ಪ, ಜಂಟಿ ಕಾರ್ಯದರ್ಶಿ ಎಸ್.ಎಚ್.ಮಂಜುನಾಥ್, ಕೋಶಾಧಿಕಾರಿ ಬಿ.ಎಂ.ಸುರೇಶ್, ನಿರ್ದೇಶಕರಾದ ಕೋಲತಂಡ ಬೋಪಯ್ಯ, ಮಾಳೇಟಿರ ಕೆ.ಬೋಪಣ್ಣ, ಆರ್.ಕೆ.ಅಬ್ದುಸ್ಸಲಾಂ, ಎಸ್.ಎ.ಅಬ್ದುಲ್ ರವೂಫ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net