ತಂಬಾಕು ಸೇವನೆಯಿಂದ ಆರೋಗ್ಯ ಹಾಳು

3Athni2
Published on

ಅಥಣಿ: ಯುವಜನಾಂಗ ಹೆಚ್ಚು ತಂಬಾಕು ಸೇವನೆ ಮಾಡುತ್ತಿರುವುದು ಕಳವಳಕಾರಿ. ತಂಬಾಕು ಸೇವನೆಯಿಂದ ಆರೋಗ್ಯ ಹದಗೆಡುತ್ತದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೆ. ರವಿಕುಮಾರ ಹೇಳಿದರು.

ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ತಂಬಾಕು ಸೇವನೆ ಮಾಡುವವರ ಸಂಖ್ಯೆ ಅಧಿಕವಾಗುತ್ತಿದೆ ಎಂದರು. ಪ್ರಭಾರಿ ಪ್ರಧಾನ ಸಿವಿಲ್ ಹಾಗೂ ಜೆಎಂಎ್ಸಿ ನ್ಯಾಯಾಧೀಶ ಎಚ್.ಓಂಕಾರಮೂರ್ತಿ ಮಾತನಾಡಿ, ರಾಜ್ಯದಲ್ಲಿ ಅಂದಾಜು 1.17 ಕೋಟಿ ಜನರು ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ ಎಂದು ತಿಳಿಸಿದರು.

4ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎ್ಸಿ ನ್ಯಾಯಾಧೀಶೆ ಭಾಗ್ಯಶ್ರೀ ಮಾದರ ಮಾತನಾಡಿ,

ವೈದ್ಯರ ಸಲಹೆ ಪಡೆದು ತಂಬಾಕು ಸೇವನೆ ಬೀಡಬೇಕು ಎಂದು ಸಲಹೆ ನೀಡಿದರು.

ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಮಾತನಾಡಿ, ತಂಬಾಕು ಸೇವನೆಯಿಂದ ಕಾನ್ಸರ್ ಸೇರಿ ಹಲವಾರು ಅಂಗಗಳಿಗೆ ಹಾನಿಯಾಗಲಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಎನ್.ಬಿ,ಖೊಕಲೆ, ಉಪಾಧ್ಯಕ್ಷ ಬಿ.ಐ.ಡಂಗಿ, ಕಾರ್ಯದರ್ಶಿ ಎಂ.ಆರ್.ಯಕ್ಕಂಚಿ, ಆರ್.ಪಿ.ನಲವಡೆ, ಎ.ಬಿ.ಗುಳಿದರ, ಮಲ್ಲಪ್ಪ ಶಿವಾಪುರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net