ಧೂಮಪಾನ ಸೇವನೆಯಿಂದ ಆರೋಗ್ಯ ಹಾಳು

indi 13-2 tambaku
ಇಂಡಿ ಪಟ್ಟಣದ ಸಿ.ವಿ. ರಾಮನ್ ಪಿಯು ಕಾಲೇಜಿನ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ದಿನವನ್ನು ಶಿವಾನಂದ ಕಾಮಗೊಂಡ ಉದ್ಘಾಟಿಸಿದರು. ಆರೋಗ್ಯಾಧಿಕಾರಿ ಎನ್.ಟಿ. ಸಂಗಾ, ಪ್ರಾಚಾರ್ಯೆ ವಿಶಾಲಾಕ್ಷಿ ಕಾಮಗೊಂಡ ಇತರರಿದ್ದರು.
Published on

ಇಂಡಿ: ಧೂಮಪಾನ ಮತ್ತು ತಂಬಾಕು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ ಹಣ ಮತ್ತು ಸಮಯ ಹಾಳು ಮಾಡುತ್ತದೆ ಎಂದು ಇಂಡಿ ಸಿವಿ ರಾಮನ್ ಕಾಲೇಜಿನ ಸಂಸ್ಥಾಪಕ ಶಿವಾನಂದ ಕಾಮಗೊಂಡ ಹೇಳಿದರು.

ಇಂಡಿ ಪಟ್ಟಣದ ಸಿ.ವಿ. ರಾಮನ್ ಪಿಯು ಕಾಲೇಜಿನ ಸಭಾ ಭವನದಲ್ಲಿ ಆರೋಗ್ಯ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ತಂಬಾಕು, ಗುಟ್ಕಾ ಸೇವನೆಗೆ ಅಂಟಿಕೊಂಡಿದ್ದಾರೆ. ಅದೊಂದು ್ಯಾಷನ್ ಮಾಡಿಕೊಂಡಿದ್ದಾರೆ. ಇದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಆರೋಗ್ಯ ಇಲಾಖೆ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸಿ, ಯುವಕರಿಗೆ ತಂಬಾಕು, ಗುಟ್ಕಾ ಸೇವನೆಯಿಂದಾಗುವ ತೊಂದರೆ ಬಗ್ಗೆ ಅರಿವು ಮೂಡಿಸಬೇಕೆಂದು ಮನವಿ ಮಾಡಿದರು.

ಆರೋಗ್ಯಾಧಿಕಾರಿ ಎನ್.ಟಿ. ಸಂಗಾ ಮಾತನಾಡಿ, ತಂಬಾಕು ಸೇವನೆಯಿಂದ ಶ್ವಾಸಕೋಶ, ಧ್ವನಿ ಪೆಟ್ಟಿಗೆ, ಅನ್ನನಾಳ, ಗಂಟಲು ಹಲವಾರು ರೀತಿಯ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಯುವಕರು ತಂಬಾಕು, ಗುಟ್ಕಾ ಸೇವಿಸಬಾರದು ಎಂದರು.

ಪ್ರಾಚಾರ್ಯೆ ವಿಶಾಲಾಕ್ಷಿ ಕಾಮಗೊಂಡ ಮಾತನಾಡಿ, ವಿಶ್ವ ತಂಬಾಕು ವಿರೋಧಿ ದಿನದ ಮುಖ್ಯ ಉದ್ದೇಶವೇ ಯುವಕರನ್ನು ಎಚ್ಚರಿಸುವುದಾಗಿದೆ. ತಂಬಾಕು ಸೇವನೆ ಯುವ ಶಕ್ತಿಯನ್ನು ನಾಶ ಮಾಡುತ್ತದೆ. ಈ ಬಗ್ಗೆ ಯುವಕರು ಎಚ್ಚರಿಕೆಯಿಂದ ಇರಬೇಕು ಎಂದರು.

ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಸಂಘದ ಮೇಲ್ವಿಚಾರಕಿ ಸರಸ್ವತಿ ರೆಡ್ಡಿ ಹಾಗೂ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net