ವ್ಯಾಗನ್​ನಲ್ಲಿ ಕಾಣಿಸಿಕೊಂಡ ಹೊಗೆ

wagon
Published on

ಹುಬ್ಬಳ್ಳಿ: ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಸರಕು ಸಾಗಣೆಯ ಬಿಟಿಪಿಎನ್ ರೈಲಿನ ವ್ಯಾಗನ್​ವೊಂದರಲ್ಲಿ ಹೊಗೆ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾದ ಘಟನೆ ಭಾನುವಾರ ನಡೆದಿದೆ.

ಕುಂದಗೋಳ ತಾಲೂಕಿನ ಸಂಶಿ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ. 54 ವ್ಯಾಗನ್​ಗಳ ರೈಲಿನ 15ನೇ ವ್ಯಾಗನ್​ನ ಹಾರ್ಟ್ ಎಕ್ಸೆಲ್​ನಲ್ಲಿ ಹೊಗೆ ಕಾಣಿಸಿದ್ದು ಸಂಶಿ ನಿಲ್ದಾಣದಲ್ಲಿ ಕರ್ತವ್ಯ ನಿರತ ಸ್ಟೇಷನ್ ಮಾಸ್ಟರ್ ಗಮನಕ್ಕೆ ಬಂದಿತ್ತು. ಅವರು ತಕ್ಷಣ ವಾಕಿ ಟಾಕಿ ಮೂಲಕ ರೈಲಿನಲ್ಲಿದ್ದ ಗಾರ್ಡ್ ಗಮನಕ್ಕೆ ತಂದಿದ್ದರು.

ಸಂಶಿ ನಿಲ್ದಾಣದಿಂದ ಸುಮಾರು 2.5 ಕಿಲೋ ಮೀಟರ್ ಮುಂದೆ ರೈಲನ್ನು ನಿಲ್ಲಿಸಿ ಹೊಗೆಯನ್ನು ನಂದಿಸಲಾಯಿತು. ರೈಲಿನಿಂದ 15ನೇ ವ್ಯಾಗನ್ ಅನ್ನು ತೆರವು ಉಳಿದ ವ್ಯಾಗನ್​ಗಳೊಂದಿಗೆ ರೈಲು ಅನ್ನು ಓಡಿಸಲಾಯಿತು ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಗಮನಕ್ಕೆ ಬಾರದಿದ್ದರೆ ದೊಡ್ಡ ದುರಂತ ಸಂಭವಿಸುವ ಸಾಧ್ಯತೆಗಳಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net