ಸಿಎಂ ಉದ್ಘಾಟನೆಗೆ ಸಜ್ಜಾಗಿದ್ದ ಕಲಾಮಂದಿರ ಮೇಲೆ  ಲೋಕಾಯುಕ್ತ ಕೇಸ್ !

Screenshot_20250420_062524_Drive.jpg
Published on

- ಬೆಳಗಾವಿ ಕಲಾಮಂದಿರ ನಿರ್ಮಾಣದಲ್ಲಿ 10 ಕೋಟಿ ರೂ. ಹಗರಣ

- ನಕಲಿ ಬಿಲ್ ಸೃಷ್ಟಿಸಿ 2 ಕೋಟಿ ರೂ.ಭ್ರಷ್ಟಾಚಾರ

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಮೃತ ಹಸ್ತದಿಂದ ಏ.20ರಂದು ಉದ್ಘಾಟನೆ ಸಜ್ಜಾಗಿದ್ದ ಕಲಾಮಂದಿರ ನಿರ್ಮಾಣದಲ್ಲಿ 10 ಕೋಟಿ ರೂ. ದುರ್ಬಳಕೆ ಆಗಿದೆ ಎಂದು ಆರೋಪಿಸಿ ಉದ್ಯನಿಯೊಬ್ಬರು ಶನಿವಾರ ಲೋಕಾಯುಕ್ತಕ್ಕೆ ದೂರು ‌ನೀಡಿದ್ದಾರೆ.

ಬೆಳಗಾವಿ ಕುಂದಾನಗರಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣಗೊಂಡಿರುವ ಕಲಾಮಂದಿರ‌ ನಿರ್ಮಾಣ ಹೆಸರಿನಲ್ಲಿ ೧೦ಕೋಟಿ ರೂ. ದುರ್ಬಳಕೆ ಮಾಡಿಕೊಳ್ಳಲಾಗಿದೆ. ನಕಲಿ ಬಿಲ್ ಗಳ ಹೆಸರಿನಲ್ಲಿ 2 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಮಂಜುನಾಥ ಬನಶಂಕರಿ ಎಂಬುವರು ಹತ್ತು ಪುಟಗಳ ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ (BSCL) ಹಾಗೂ ಪ್ರಾಜೆಕ್ಟ್ ಅಧಿಕಾರಿಗಳು ಕಲಾಮಂದಿರ 47 ಕೋಟಿ ರೂ. ದಿಂದ 57 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಇದಕ್ಕೆ ಯಾವುದೇ ರೀತಿಯ ಅನುಮೋದನೆ ಪಡೆದುಕೊಂಡಿಲ್ಲ. ಮೂಲ ಯೋಜನೆಯ ವಿವರಿತ ಯೋಜನೆ ವರದಿಯು (DPR) 47 ಕೋಟಿಯುಳ್ಳದಾಗಿದ್ದರೂ, ಅದನ್ನು ಯಾವುದೇ ಅಧಿಕೃತ ಅನುಮೋದನೆ ಇಲ್ಲದೆ 57 ಕೋಟಿಗೆ ಏರಿಸಲಾಗಿದೆ ಎಂದು ದೂರಿದ್ದಾರೆ. ಯೋಜನೆ ಕಾಮಗಾರಿ ಅಂತಿಮ ಹಂತದ ಚೇಲಕೆ ಮೇಲೆ ಯೋಜನಾ ವೆಚ್ಷಿಸಲಾಗಿದೆ

ಕರ್ನಾಟಕ ಪಬ್ಲಿಕ್ ಪ್ರಾಕ್ಯುರ್ಮೆಂಟ್ ನಿಯಮಗಳು, 2000ರ ನಿಯಮ 18ಕ್ಕೆ ಉಲ್ಲಂಘನೆ ಆಗಿವೆ. ಈ ಹೆಚ್ಚುವರಿ ಬಿಲ್ಲುಗಳಲ್ಲಿ ನಿಡಲ್ಪಟ್ಟ ಕೆಲಸಗಳಿಗೆ ಸಂಬಂಧಿಸಿದಂತೆ ಯಾವುದೇ ಸಹಿ ಇರುವ ತಾಂತ್ರಿಕ ಅನುಮೋದನೆ ಅಥವಾ ಹಣಕಾಸು ಅನುಮೋದನೆಯ ದಾಖಲೆಗಳು ಲಭ್ಯವಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

2019ರಿಂದ 2024ರ ನಡುವೆ ಒಟ್ಟು 9 ಹೆಚ್ಚುವರಿ ಬಿಲ್ಲುಗಳು ಅನುಮೋದನೆಗೊಂಡಿವೆ. ಇವುಗಳಲ್ಲಿ ಒಂದು ಅಕ್ಟೋಬರ್ 2024ರಲ್ಲಿ – ಅಂತಿಮ ಬಿಲ್‌ಗೂ ನಂತರ. ಬಿಲ್ 2 ಕೋಟಿ ರೂ.ಗೂ ಮೀರಿದ್ದು, ಅದು ಬಹುತೇಕ ಇಲೆಕ್ಟಿಕಲ್ ಸಾಮಗ್ರಿಗೆ ಸಂಬಂಧಿಸಿದೆ- ಇವು ಅಂತಿಮ ಬಿಲ್ಲಿನ ನಂತರ ಹೆಚ್ಚುವರಿ ಬಿಲ್‌ಗೆ ಅನುದಾನ ನೀಡಬಾರದು ಎಂಬ ನಿಯಮದ ಉಲ್ಲಂಘನೆ ಆಗಿದೆ.

ಹಣಕಾಸು ಇಲಾಖೆ ಆದೇಶ ಸಂಖ್ಯೆ FD 59 Pro Cell 2004 ಗೆ ನೇರ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಭ್ರಷ್ಟಾಚಾರ ತಡೆಯುವ ಕಾಯ್ದೆ, 1988 ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net