ಮಸಣ ಕಾರ್ಮಿಕರ ಬೇಡಿಕೆಗಾಗಿ 22ಕ್ಕೆ ವಿಧಾನಸೌಧ ಚಲೋ

IMG-20250120-WA0015
Published on

ಕಲಬುರಗಿ: ಮಸಣ ಕಾರ್ಮಿಕರು, ದೇವದಾಸಿ ಮಹಿಳೆಯರ ಗಣತಿ ಮಾಡಿ ಪಿಂಚಣಿ, ನಿರಾಶ್ರಿತ ದಲಿತರಿಗೆ ಮನೆ ನೀಡಬೇಕು, ಭೂ ಒಡೆತನ ಯೋಜನೆ ಜಾರಿ ಮಾಡಬೇಕು, ದಲಿತ ಬಡ ರೈತರಿಗೆ ಗಂಗಾಕಲ್ಯಾಣ ಯೋಜನೆ ಅಡಿ ಕೊಳವೆ ಬಾವಿ ಮಂಜೂರು ಮಾಡಲು ಆಗ್ರಹಿಸಿ ಜ.22ರಂದು ಬೆಂಗಳೂರಿನ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಂಚಾಲಕ ಸುಧಾಮ ಧನ್ನಿ ತಿಳಿಸಿದ್ದಾರೆ.

ಎಸ್ಸಿಪಿ, ಟಿಎಸ್ ಪಿ ಹಣ ದಲಿತರಿಗೆ ಬಳಕೆ ಕುರಿತು ವಿಶೇಷ ಅಧಿವೇಶನ ಕರೆದು, ಚರ್ಚಿಸಬೇಕು, ಬಜೆಟ್ ನಲ್ಲಿ ದಲಿತರ ಅಭಿವೃದ್ಧಿಗೆ ಆದ್ಯತೆ ಮೇಲೆ ಅನುದಾನ ಮೀಸಲು ಇಡಬೇಕು, ದಲಿತರಿಗೆ ಸ್ಮಶಾನ ಭೂಮಿ, ಸಮುದಾಯ ಭವನ ಪ್ರತಿ ಗ್ರಾಮಕ್ಕೆ ಒದಗಿಸಬೇಕು ಎಂದು ಆಗ್ರಹಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಸಣ ಕಾರ್ಮಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net