ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಅತ್ಯವಶ್ಯ

LKP 1-2A
ಚಿಕ್ಕೂರ ಗ್ರಾಮದಲ್ಲಿ ಸ್ಮಾರ್ಟ್ ಕ್ಲಾಸ್‌ಗಳಿಗೆ ಸಚಿವ ಆರ್.ಬಿ. ತಿಮ್ಮಾಪೂರ ಚಾಲನೆ ನೀಡಿದರು. ಸಂಜಯ ತಳೇವಾಡ, ರಾಜು ಬಾಗವಾನ, ಮಂಜುಗೌಡ ಪಾಟೀಲ, ಯಶವಂತ ಮಾದರ, ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ಇದ್ದರು.
Published on

ಲೋಕಾಪುರ: ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಅತಿ ಅವಶ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಸಮೀಪದ ಚಿಕ್ಕೂರದಲ್ಲಿ ಅಂದಾಜು 3.15 ಕೋಟಿ ರೂ. ವೆಚ್ಚದಲ್ಲಿ ಮುಧೋಳ ತಾಲೂಕಿನ 42 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್‌ಗಳಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ತಾಲೂಕಿನ 25 ಸರ್ಕಾರಿ ಶಾಲೆಗಳಿಗೆ ಶುದ್ಧ ನೀರಿನ ಘಟಕ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ತಾಲೂಕಿನ ಪ್ರತಿಯೊಂದು ಸರ್ಕಾರಿ ಶಾಲೆಗಳಿಗೂ ನೀಡಲಾಗುವುದು. ಶಾಲೆಗಳ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಶೌಚಗೃಹ, ಶಾಲೆಯ ಕಟ್ಟಡ ಮತ್ತು ಕಾಂಪೌಂಡ್ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಸ್ಮಾರ್ಟ್ ಕ್ಲಾಸ್‌ಗಳಿಂದ ಶಿಕ್ಷಕರು ಮತ್ತು ಮಕ್ಕಳ ಮೇಲಿನ ಹೊರೆ ಕಡಿಮೆ ಮಾಡುವುದಲ್ಲದೆ, ಮಕ್ಕಳು ಬಹುಬೇಗ ವಿಷಯ ಗ್ರಹಿಸುತ್ತಾರೆ. ತರಗತಿಯ ಡಿಜಿಟಲ್ ಪರದೆಯತ್ತ ತಮ್ಮ ಮನಸ್ಸನ್ನು ಕೇಂದ್ರೀಕರಿಸುವುದರಿಂದ ಪಠ್ಯದ ವಿಷಯಗಳು ಬೇಗನೆ ಮಕ್ಕಳ ಮನಸ್ಸಿನಲ್ಲಿ ಉಳಿಯುತ್ತವೆ. ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳಲ್ಲಿ ಒಳ್ಳೆಯ ಸಂಸ್ಕೃತಿ, ಆಚಾರ- ವಿಚಾರಗಳನ್ನು ಶಿಕ್ಷಕರು ಕಲಿಸುತ್ತಿದ್ದಾರೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ಮಾತನಾಡಿ, ಶಿಕ್ಷಣ ರಂಗಕ್ಕೆ ಸಚಿವರು ಹೆಚ್ಚಿನ ಮುತವರ್ಜಿ ವಹಿಸಿದ್ದಾರೆ. ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಕಡಿಮೆ ಮಾಡಿಲ್ಲ. ನಮ್ಮ ತಾಲೂಕಿನ ಸರ್ಕಾರಿ ಶಾಲೆ ಮಕ್ಕಳು ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.

ಉದಯ ಸಾರವಾಡ, ಸಂಜಯ ತಳೇವಾಡ, ಕೆ.ಎನ್. ಪರಡ್ಡಿ, ರಾಜುಗೌಡ ನ್ಯಾಮಗೌಡ್ರ, ರಾಜು ಬಾಗವಾನ, ಹೊಳಬಸು ದಂಡಿನ, ವೆಂಕಣ್ಣ ಅಂಕಲಗಿ, ಮಹಾದೇವ ಹೊಸಟ್ಟಿ, ಮಂಜುಗೌಡ ಪಾಟೀಲ, ಯಶವಂತ ಮಾದರ, ಬಸಪ್ಪ ಸೊನ್ನದ, ಮೊಹನ ಸೊನ್ನದ, ಭೀಮಶಿ ಅರಳಿಕಟ್ಟಿ, ತಹಸೀಲ್ದಾರ್ ಮಹಾದೇವ ಎಂ. ಸನಮೂರಿ, ತಾಲೂಕುಮಟ್ಟದ ಅಧಿಕಾರಿಗಳಾದ ಇಒ ಉಮೇಶ ಸಿದ್ನಾಳ, ಹೊಳಬಸಪ್ಪ ಕರೆಹೊನ್ನ, ಮೋಹನ ಕೊರಡ್ಡಿ, ಮಹಮ್ಮದ ಹನಿಫ್ ತಹಸೀಲ್ದಾರ್, ಮಹೇಶ ದಂಡನ್ನವರ, ವಿಜಯಕುಮಾರ ಜಿ.ಕೆ., ಚನ್ನಬಸವ ಮಾಚನೂರ, ವಿದ್ಯಾ ಕೋರೆವ್ವಗೋಳ, ಅಶೋಕ ಕ್ಯಾದಗಿರಿ, ವಿನೋದ ಸಂಕೆಣ್ಣವರ, ಪಿಡಿಒಗಳಾದ ಶ್ರೀನಿವಾಸ ಚಿಗರಡ್ಡಿ, ಟಿ.ಆರ್. ಶಿಲ್ಪಶ್ರೀ, ಶಿಕ್ಷಕರಾದ ರಮೇಶ ಸಿಂಗರಡ್ಡಿ, ಆರ್. ಎಸ್. ಪಾಟೀಲ, ಎಂ.ಎನ್. ಕೋಲಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net