ಎಲ್ಲ ಶಾಲೆಗಳಿಗೂ ಸ್ಮಾರ್ಟ್‌ಬೋರ್ಡ್

web4
ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಿದರು. ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ರವೀಂದ್ರ ಹಾದಿಮನಿ, ಸಿ.ವೈ. ತುಬಾಕಿ, ಡಾ.ಅರ್ಚನಾ ಅಥಣಿ ಇತರರಿದ್ದರು.
Published on

ಚನ್ನಮ್ಮನ ಕಿತ್ತೂರು: ಸಮಾಜದಲ್ಲಿ ಗುರುವಿಗೆ ಗೌರವದ ಸ್ಥಾನಮಾನ ನೀಡಲಾಗಿದೆ. ಮಕ್ಕಳ ಬದುಕು ಸುಂದರವಾಗಿ ನಿರ್ಮಿಸುವವರೇ ನಿಜವಾದ ಶಿಕ್ಷಕರು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಚನ್ನಮ್ಮನ ಕಿತ್ತೂರು ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸಮಾರಂಭದಲ್ಲಿ ಮಾತನಾಡಿದರು. ಕ್ಷೇತ್ರಕ್ಕೆ ಬೇಕಾಗುವ ಶೈಕ್ಷಣಿಕ ಸವಲತ್ತುಗಳನ್ನು ಪೂರೈಸುವೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಉತ್ತಮ ಲಿತಾಂಶ ಬಂದರೆ ಹೆಚ್ಚು ಸಂತೋಷ ಪಡುತ್ತೇನೆ. ನನ್ನ ಅವಧಿಯಲ್ಲೇ ಎಲ್ಲ ಶಾಲೆಗಳಿಗೂ ಸ್ಮಾರ್ಟ್‌ಬೋರ್ಡ್ ಅಳವಡಿಸುತ್ತೇನೆ ಎಂದರು.

ಉಪನ್ಯಾಸಕಿ ಡಾ.ಅರ್ಚನಾ ಅಥಣಿ ಮಾತನಾಡಿ, ಶಿಕ್ಷಕರಾಗಿ ಮಕ್ಕಳ ಬದುಕು ಸುಂದರವಾಗಿಸಲು ಶ್ರಮಿಸೋಣ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ. ತುಬಾಕಿ, ಶಾಲಾ ಶಿಕ್ಷಣ ಇಲಾಖೆ ನಿವೃತ್ತ ಆಯುಕ್ತ ವೆಂಕಟೇಶ ಮಾಚಕನವರ ಮಾತನಾಡಿದರು. ನಿವತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ರಾಜ್ಯಮಟ್ಟದ ಇನ್ಸಪೈಯರ್ಡ್ ಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿನಿ ನಾಗರತ್ನ ಕೊಳ್ಳಿ ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಿಸಲಾಯಿತು.

ಶಿಕ್ಷಕರಿಗೆ ತಾಲೂಕುಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ವಿತರಿಸಲಾಯಿತು. ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಹಸೀಲ್ದಾರ್ ರವೀಂದ್ರ ಹಾದಿಮನಿ, ತಾಪಂ ಇಒ ಕಿರಣ ೋರ್ಪಡೆ, ಸಿಪಿಐ ಶಿವಾನಂದ ಗುಡಗನಟ್ಟಿ, ಜಿ.ಎಂ. ಗಣಾಚಾರಿ, ಕ್ಷೇತ್ರ ಸಮನ್ವಯಾಧಿಕಾರಿ ಗಾಯತ್ರಿ ಅಜ್ಜನ್ನವರ, ಸಹಾಯಕ ನಿರ್ದೇಶಕ ಡಾ.ಪಿ.ಡಿ. ಮೆಳವಂಕಿ, ಮೀನಾಕ್ಷಿ ಹಿಳ್ಳಿ ಇತರರಿದ್ದರು.

ತಲ್ಲೂರ ವರದಿ: ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಜಯಂತಿ ನಿಮಿತ್ತ ಶಿಕ್ಷಕರ ದಿನ ಆಚರಿಸಲಾಯಿತು. ಮುಖ್ಯಶಿಕ್ಷಕ ಡಿ.ಡಿ. ಭೋವಿ, ಶಿಕ್ಷಕರಾದ ಎಸ್.ಎ್. ಮುರಗನ್ನವರ, ಎಸ್.ಎಂ.ಹಂಜಿ, ಮಲ್ಲಿಕಾರ್ಜುನ ಬದಾಮಿ, ವಿಜಯಲಕ್ಷ್ಮೀ ಕಳಸನ್ನವರ, ಎಲ್.ಎ.ರಾಯಣ್ಣವರ, ಅಶ್ವಿನಿ ಹಿರೇಮಠ, ಚನ್ನಮ್ಮ ಲಕ್ಕನ್ನವರ, ಪ್ರೀತಿ ಪಾಟೀಲ, ಪುಷ್ಪಾ ಬಳ್ಳಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net