ಸ್ಮಾರ್ಟ್ ಮೀಟರ್ ಹಗರಣ: ಕೋರ್ಟ್‌ನಲ್ಲಿ ಉತ್ತರ ಕೊಡುತ್ತೇನೆ ಎಂದ ಸಚಿವ ಕೆ.ಜೆ. ಜಾರ್ಜ್

K J GEORGE
ವಿಜಯಪುರ ಜಿಪಂ ಸಭಾಂಗಣದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
Published on

ಮೈಸೂರು : ಸ್ಮಾರ್ಟ್ ಮೀಟರ್ ವಿಚಾರದಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದು, ನಾವು ನ್ಯಾಯಾಲಯದಲ್ಲಿ ಉತ್ತರ ಕೊಡುತ್ತೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಅವರು ಕೋರ್ಟ್‌ಗೆ ಹೋಗಿದ್ದು ಒಳ್ಳೆಯದ್ದೇ ಬಿಡಿ. ಇನ್ನೂ ಯಾರು ಯಾರು ಎಲ್ಲೆಲ್ಲಿ ದೂರು ಕೊಡುತ್ತಾರೋ ಕೊಡಲಿ, ಎಲ್ಲವನ್ನೂ ಎದುರಿಸುವ ಶಕ್ತಿ ನನಗಿದೆ. ಸ್ಮಾರ್ಟ್ ಮೀಟರ್ ವಿಚಾರದಲ್ಲಿ ಯಾವುದೇ ಕಿಕ್ ಬ್ಯಾಕ್ ನಡೆದಿಲ್ಲ. ಎಲ್ಲರಿಗೂ ಎಲ್ಲದರ ವಿವರಣೆ ಕೊಟ್ಟಿದ್ದೇನೆ ಎಂದರು.

ಸ್ಮಾರ್ಟ್ ಮೀಟರ್ ವಿಚಾರದಲ್ಲಿ ಬಿಜೆಪಿ ಅನಗತ್ಯ ಆರೋಪ ಮಾಡುತ್ತಿದೆ. ಬಿಜೆಪಿಗೆ ಕಿಕ್ಕ್ ಇಲ್ಲ ಬ್ಯಾಕೂ ಇಲ್ಲ. ಅವರು ಎಲ್ಲ ವಿಚಾರದಲ್ಲೂ ಇಂತಹದೇ ಆರೋಪಗಳನ್ನು ಮಾಡುತ್ತಾರೆ. ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಡ್ಜ್ ವಿಚಾರದಲ್ಲೂ ಇದೇ ರೀತಿ ಆರೋಪ ಮಾಡಿದರು. ಬ್ರಿಡ್ಜ್ ನಿರ್ಮಾಣ ಆಗದೆ ಜನರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಐಎಎಸ್ ಅಧಿಕಾರಿ ಡಿ.ಕೆ. ರವಿ ಪ್ರಕರಣದಲ್ಲೂ ನನ್ನ ವಿರುದ್ಧ ಬಿಜೆಪಿಯವರು ಅನಗತ್ಯ ಆರೋಪಗಳನ್ನು ಮಾಡಿದರು. ಆ ನಂತರ ಸಿಬಿಐ ರಿಪೋರ್ಟ್‌ನಲ್ಲಿ ಏನು ಬಂತು ಹೇಳಿ? ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ ಎಂಬುದು ತನಿಖೆಯಿಂದ ತಿಳಿದು ಬಂತು. ಈಗ ಬಂದಿರುವ ಆರೋಪ ಸಹ ಅಂತಹದ್ದೇ. ಪ್ರತಿ ಬಾರಿ ಬಿಜೆಪಿಯವರು ನನ್ನ ಮೇಲೆ ಏತಕ್ಕೆ ಈ ರೀತಿಯ ಆರೋಪ ಮಾಡುತ್ತಾರೋ ಗೊತ್ತಿಲ್ಲ. ನಾನೇನು ಸಾಫ್ಟ್ ಲೀಡರ್ ಅಲ್ಲ. ಭಾಷೆಯನ್ನು ಸೌಜನ್ಯವಾಗಿ ಮಾತನಾಡುತ್ತೇನೆ ಅಷ್ಟೇ. ನಾನು ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದವನು. ಹಲವು ಇಲಾಖೆಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ಸಾಫ್ಟ್ ಆಗಿದ್ದರೆ ಇವೆಲ್ಲ ಆಗುತಿತ್ತಾ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net