ಮಂಗಳ ಕ್ರೀಡಾಂಗಣದಲ್ಲಿ ಸ್ಮಾರ್ಟ್ ಫುಡ್‌ಸ್ಟ್ರೀಟ್

mng_26 aug mangala 1
ಮಂಗಳ ಕ್ರೀಡಾಂಗಣದ ಬಳಿ ಸ್ಮಾರ್ಟ್‌ಸಿಟಿ ಸಹಯೋಗದಲ್ಲಿ ಫುಡ್‌ಸ್ಟ್ರೀಟ್ ಯೋಜನೆ ಹಮ್ಮಿಕೊಂಡಿದ್ದು, ಇದಕ್ಕಾಗಿ ಕ್ರೀಡಾಂಗಣದ ಹಿಂಬದಿಯ ರಸ್ತೆಯನ್ನು ಬಳಸಿಕೊಂಡು ಆರಂಬಿಕ ಕಾಮಗಾರಿ ನಡೆಯುತ್ತಿದೆ.
Published on

ಮಂಗಳೂರು: ಮಂಗಳ ಕ್ರೀಡಾಂಗಣದ ಬಳಿ ಸ್ಮಾರ್ಟ್‌ಸಿಟಿ ಸಹಯೋಗದಲ್ಲಿ ಫುಡ್‌ಸ್ಟ್ರೀಟ್ ಯೋಜನೆ ಹಮ್ಮಿಕೊಂಡಿದ್ದು, ಇದಕ್ಕಾಗಿ ಕ್ರೀಡಾಂಗಣದ ಹಿಂಬದಿಯ ರಸ್ತೆಯನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ಇತ್ತೀಚೆಗೆ ಮಂಗಳ ಕ್ರೀಡಾಂಗಣ ಅಭಿವೃದ್ದಿ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮುಲ್ಲ್ತ್ರೈ ಮುಗಿಲನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಂಗಳ ಕ್ರೀಡಾಂಗಣದಲ್ಲಿ ಸ್ಮಾರ್ಟ್ ಫುಡ್‌ಸ್ಟ್ರೀಟ್ ರಚಿಸಲು ನಿರ್ಧರಿಸಲಾಗಿತ್ತು. ಇದರಿಂದ ಬರುವ ಆದಾಯವನ್ನು ಮಂಗಳ ಕ್ರೀಡಾಂಗಣದ ಅಭಿವೃದ್ದಿಗೆ ಬಳಸಿಕೊಳ್ಳಲು ಯೋಜನೆ ರೂಪಿಸಿದ್ದರು.

*ಬೀದಿ ಬದಿ ವ್ಯಾಪಾರಕ್ಕೆ ಕಡಿವಾಣ

ಮಂಗಳ ಕ್ರೀಡಾಂಗಣದಲ್ಲಿ ಕಾರ್ಯಕ್ರಮಗಳಾದಗ ಇಲ್ಲಿಗೆ ಆಗಮಿಸುವವರಿಗೆ ಕ್ರೀಡಾಂಗಣದ ಹೊರಬಾಗದಲ್ಲಿರುವ ಬೀದಿ ಬದಿ ವ್ಯಾಪಾರದಿಂದ ತೊಂದರೆಯಾಗುತ್ತಿದೆ. ಜತೆಗೆ ಈಭಾಗದಲ್ಲಿ ಪಾರ್ಕಿಂಗ್ ಸಮಸ್ಯೆಯಿಂದ ಟ್ರಾಫಿಕ್ ಜ್ಯಾಮ್ ಸರ್ವೇ ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಸ್ಮಾರ್ಟ್ ಮಂಗಳ ಕ್ರೀಡಾಂಗಣದ ಹಿಂಭಾಗದಲ್ಲಿರುವ ರಸ್ತೆಯನ್ನು ಸ್ಮಾರ್ಟ್‌ಸಿಟಿ ಮೂಲಕ ಫುಡ್‌ಸ್ಟ್ರೀಟ್‌ಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದ್ದರು.

-------------------

ಬೀದಿಬದಿ ವ್ಯಾಪಾರವೆಂದರೆ, ಕುಳಿತುಕೊಂಡು, ತಳ್ಳುಗಾಡಿ ಅಥವಾ ತಲೆಯಲ್ಲಿ ಹೊತ್ತು ವ್ಯಾಪಾರ ಮಾಡುವುದಾಗಿದೆ. ಅದಕ್ಕಾಗಿ ನಗರದಲ್ಲಿ 10 ಕಡೆಗಳಲ್ಲಿ ವ್ಯಾಪಾರ ವಲಯಗಳನ್ನು ಗುರುತಿಸಿ ನಗರ ಯೋಜನಾ ಸಮಿತಿಯಲ್ಲಿ ನಿರ್ಧರಿಸಿ ಪರಿಶೀಲನೆ ಮಾಡಿ ಕ್ರಮ ವಹಿಸಲಾಗುವುದು. ಮಂಗಳ ಕ್ರೀಡಾಂಗಣದ ಹಿಂಬದಿಯ ರಸ್ತೆಯನ್ನು ಗುರುತಿಸಿ ಸ್ಮಾರ್ಟ್‌ಸಿಟಿ ಅನುದಾನದಲ್ಲಿ ‘ಫುಡ್ ಸ್ಟ್ರೀಟ್’ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಸುದೀರ್ ಶೆಟ್ಟಿ ಕಣ್ಣೂರು, ಮೇಯರ್

------------------

ಮಂಗಳ ಕ್ರೀಡಾಂಗಣದ ಬಳಿ ಸ್ಮಾರ್ಟ್‌ಸಿಟಿ ಸಹಯೋಗದಲ್ಲಿ ಫುಡ್‌ಸ್ಟ್ರೀಟ್ ನಿರ್ಮಿಸುವ ಯೋಜನೆ ಹಮ್ಮಿಕೊಂಡಿದ್ದು, ಇದರಿಂದ ಮಂಗಳ ಕ್ರೀಡಾಗಣಕ್ಕೆ ಸ್ವಲ್ಪ ಆದಾಯ ಬರಲಿದೆ. ಈಬಗ್ಗೆ ಜಿಲ್ಲಾಧಿಕಾರಿಯವರ ನಿರ್ಧೆಶನದಂತೆ ಆರಂಭಿಕ ಕಾಮಗಾರಿ ನಡೆಯುತ್ತಿದೆ. ಸ್ವಚ್ಚತೆ ಹಾಗೂ ಶುದ್ದತೆಗೆ ಇಲ್ಲಿ ಹೆಚ್ಚಿನ ಪ್ರಾಮುಖ್ಯೆ ನೀಡಲಾಗುತ್ತಿದ್ದು, ಫುಡ್‌ಸ್ಟ್ರೀಟ್ ಜತೆಗೆ ಚರಂಡಿ ವ್ಯವಸ್ಥೆ, ಸೌಚಗೃಹ ಮುಂತಾದ ಕಾರ್ಯಗಳು ಇಲ್ಲಿ ನಡೆಯಲಿದೆ.

ಪ್ರದೀಪ್ ಡಿಸೋಜಾ, ಉಪನಿರ್ದೇಶಕರು,

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net