ಸೇವೆ ಸಲ್ಲಿಸಿದ ಶಾಲೆಗೆ ಸ್ಮಾರ್ಟ್ ಕೊಡುಗೆ

26
Published on

ಮೈಸೂರು: ತಮಗೆ ಬಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಮೊತ್ತವನ್ನು ತಾವು ಸೇವೆ ಸಲ್ಲಿಸಿದ ಶಾಲೆಗೆ ಸ್ಮಾರ್ಟ್ ಬೋರ್ಡ್ ಕೊಡುಗೆ ನೀಡುವ ಮೂಲಕ ಶಿಕ್ಷಕ ನಾಗಣ್ಣ ಅವರು ವಿದ್ಯಾರ್ಥಿ ಪ್ರೇಮ ಮೆರೆದಿದ್ದಾರೆ.

ಕುಂಬಾರಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಿಂದಿನ ಮುಖ್ಯಶಿಕ್ಷಕ ನಾಗಣ್ಣ ಅವರು ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಸಹಕಾರದಲ್ಲಿ ಇತ್ತೀಚೆಗೆ ಸ್ಮಾರ್ಟ್‌ಬೋರ್ಡ್ ನೀಡಿದ್ದಾರೆ.

ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯಿಂದ ದೊರೆತ 50 ಸಾವಿರ ರೂ. ಹಾಗೂ ಹಳೆ ವಿದ್ಯಾರ್ಥಿಗಳ ಸಂಘದಿಂದ 80 ಸಾವಿರ ರೂ. ಸೇರಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಒಟ್ಟು 1.30 ಲಕ್ಷ ರೂ. ನ ಸ್ಮಾರ್ಟ್ ಬೋರ್ಡ್ ನೀಡಲಾಗಿದೆ.

ವಕೀಲ ಸಿ.ವಿ.ಕೇಶವಮೂರ್ತಿ, ನಿವೃತ್ತ ಐಎಎಸ್ ಅಧಿಕಾರಿ ಸಿ.ವಿ. ಗೋಪಿನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಹಾಲಿ ಮುಖ್ಯಶಿಕ್ಷಕ ಲೋಹಿತ್, ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಿ.ಲಿಂಗರಾಜಣ್ಣ, ಹೆಬ್ಬಾಳಿನ ಶ್ರೇಯಸ್ ಮೆಡಿಕಲ್ಸ್ ಮಾಲೀಕ ದೇವರಾಜ, ಇನ್ನಿತರ ಪದಾಧಿಕಾರಿಗಳು, ಎಸ್‌ಡಿಎಂಸಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net