ಎಲ್ಲ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಶೀಘ್ರ

banakar
Published on

ಹಿರೇಕೆರೂರ: ಉತ್ತಮ ವಾತಾವರಣ ಸೃಷ್ಟಿಸಿ ಗುಣಮಟ್ಟದ ಶಿಕ್ಷಣ ದೊರಕಿಸುವಲ್ಲಿ ಎಸ್‌ಡಿಎಂಸಿ ಪಾತ್ರ ಮಹತ್ವದಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ನೂತನ ಎಸ್‌ಡಿಎಂಸಿ ಸದಸ್ಯರಿಗೆ ಸ್ವಾಗತ ಹಾಗೂ ಹಳೆಯ ಸದಸ್ಯರಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಎಲ್ಲ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗುವುದು. 40 ಶಾಲೆಗಳಿಗೆ ಈಗಾಗಲೇ ಕುಡಿಯುವ ನೀರು ಪೂರೈಕೆಗೆ ಕೊಳವೆ ಬಾವಿ ಕೊರೆಸಲಾಗಿದೆ. ಸರ್ಕಾರಿ ಪ್ರೌಢಶಾಲೆಗೆ ಹಂತ ಹಂತವಾಗಿ ಶೌಚಗೃಹ ನಿರ್ಮಾಣ, ದಾಸೋಹ ಭವನ, ಹೆಚ್ಚುವರಿ ಕೊಠಡಿ, ಕಾಂಪೌಂಡ್ ನಿರ್ಮಿಸಲಾಗುವುದು ಎಂದರು.

ಶಾಲೆ ಮುಖ್ಯಶಿಕ್ಷಕ ಎನ್. ಸುರೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಹಳೆಯ ಸದಸ್ಯರಾದ ಕಲ್ಲಪ್ಪ ಬನ್ನಿಹಟ್ಟಿ, ಶಂಕ್ರಪ್ಪ ಅಂಗಡಿ, ವಿ,ವಿ, ಹಿತ್ತಲಮನಿ ಅವರನ್ನು ಸನ್ಮಾನಿಸಲಾಯಿತು ಹಾಗೂ ನೂತನ ಸದಸ್ಯರಾದ ರವಿ ಸಿದ್ದಪ್ಪಗೌಡ್ರ, ಪಿ.ಬಿ. ನಿಂಗನಗೌಡ್ರ, ಪ್ರಕಾಶ್ ಹಿತ್ಲಳ್ಳಿ, ಗದಿಗೆಪ್ಪ ಕೋರಿಗೌಡ್ರ, ಪರಮೇಶಪ್ಪ ಗಿಡ್ಡಪ್ಪಗೌಡ್ರ, ಲತಾ ಅಗಸಿಬಾಗಿಲ, ನಯಾಜ್ ಬಳಿಗಾರ, ರವಿ ನಾಯ್ಕರ್, ಸುರೇಶ್ ಕಲಾಲ ಅವರನ್ನು ಸ್ವಾಗತಿಸಿಲಾಯಿತು. ಮೇಘರಾಜ ಮಾಳಗಿಮನಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net